ಗಾಜಿಯಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ನೇಹಿತನನ್ನು ಕೊಂದು ಶವವನ್ನು ಟ್ರಾಲಿ ಬ್ಯಾಗ್ನಲ್ಲಿ ಹಾಕಿ ಎಸೆಯಲು ಯತ್ನಿಸಿದ ಪ್ರೀತಿ ಶರ್ಮಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದ ಪ್ರೀತಿ ಶರ್ಮ, ಫಿರೋಜ್ ಅಲಿಯಾಸ್ ಚವಾನಿ (23) ಜತೆ ವಾಸವಿದ್ದಳು. ಭಾನುವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ಪ್ರೀತಿ ಶರ್ಮ ಟ್ರಾಲಿ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದುದನ್ನು ಕಂಡ ಪೊಲೀಸರಿಗೆ ಅನುಮಾನ ಬಂದು ಬ್ಯಾಗ್ ಪರಿಶೀಲಿಸಿದಾಗ ಒಳಗೆ ಯುವಕನ ಶವ ಪತ್ತೆಯಾಯಿತು. ವಿಚಾರಣೆ ವೇಳೆ ಮಹಿಳೆ ತನ್ನ ಸ್ನೇಹಿತನ ಶವ ಎಂದು ಬಹಿರಂಗಪಡಿಸಿದ್ದಾಳೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಮುನಿರಾಜ್ ಜಿ ತಿಳಿಸಿದ್ದಾರೆ.
ಪ್ರೀತಿ ಶರ್ಮಾ ಅವರು ಫಿರೋಜ್ ಅವರನ್ನು ಮದುವೆಯಾಗಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಬೇರೆ ಸಮುದಾಯದವರನ್ನು ಮದುವೆಯಾಗಲು ಪೋಷಕರು ಬಿಡುವುದಿಲ್ಲ ಎಂಬ ಕಾರಣಕ್ಕೆ ಆತ ನಿರಾಕರಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
ಪ್ರೀತಿ ಶರ್ಮ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರಿದಾಗ ಫಿರೋಜ್ ಕೋಪಗೊಂಡು ನಿಂದಿಸಿದ್ದಾನೆ. ಇದರಿಂದ ಕೋಪಗೊಂಡ ಪ್ರೀತಿ ಶರ್ಮ ರೇಜರ್ ನಿಂದ ಫಿರೋಜ್ ನ ಕತ್ತು ಸೀಳಿದ್ದಾಳೆ. ಬಳಿಕ ಟ್ರಾಲಿ ಬ್ಯಾಗ್ ಖರೀದಿಸಿ ಮೃತದೇಹವನ್ನು ಹಾಕಿ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ತನ್ನ ಬ್ಯಾಗನ್ನು ಎಸೆಯಲು ಯತ್ನಿಸುತ್ತಿದ್ದಾಗ ಪೊಲೀಸರು ಆಕೆಯನ್ನು ಹಿಡಿದಿದ್ದಾರೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ. ಆರೋಪಿ ಕೃತ್ಯಕ್ಕೆ ಬಳಸಿದ್ದ ರೇಜರ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.