ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಕೇರಳದ ಮಲಪುರಂ ಜಿಲ್ಲೆಯ ಕಡಂಪುಝ ನಿವಾಸಿ ಶಿಹಾಬುದ್ದೀನ್ (40) ಅಬುಧಾಬಿಯಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿಹಾಬುದ್ದೀನ್ ತನ್ನ ಕೆಲಸದ ಸ್ಥಳಕ್ಕೆ ತೆರಳುತ್ತಿದ್ದಾಗ ಅವರ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.
ಮುಕ್ರಿಯನ್ ಯಾಹ್ಯಾ ಮತ್ತು ನಫೀಸಾ ದಂಪತಿಯ ಮಗನಾದ ಶಿಹಾಬುದ್ದೀನ್ ಈ ಕುಟುಂಬದ ಏಕೈಕ ಆಸರೆಯಾಗಿದ್ದರು. ಅವರು ಪತ್ನಿ ಮತ್ತು ಮೂವರು ಮಕ್ಕಳು, ಸಹೋದರಿಯರಾದ ನಜರ್, ನದೀರಾ ಮತ್ತು ಬುಶ್ರಾ ರನ್ನು ಅಗಲಿದ್ದಾರೆ. ಬನಿಯಾದ ಕೇಂದ್ರ ಶವಾಗಾರದಲ್ಲಿ ಇರಿಸಲಾಗಿರುವ ಮೃತ ಶರೀರವನ್ನು ನಾಳೆ ಊರಿಗೆ ಕೊಂಡೊಯ್ಯಲಾಗುವುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.