ಪುತ್ತೂರು (www.vknews.in) : ತಾ 11/08/2022 ಗುರುವಾರ ರೋಟರಿ ಟ್ರಸ್ಟ್ ಹಾಲ್ ನಲ್ಲಿ ರೋಟರಿ ಕ್ಲಬ್ ಸ್ವರ್ಣ ಮತ್ತು ರೋಟರಿ ಕ್ಲಬ್ ಸೆ೦ಟ್ರಲ್ ಸೇರಿಕೊಂಡು ಜ೦ಟಿಯಾಗಿ ಮೊಹರ೦ ಮತ್ತು ರಾಕಿ ಹಬ್ಬವನ್ನು ಆಚರಿಸಿತು.
ಮೊಹರ೦ ಸಂಬಂಧ ರೋಟರಿ ಸೆ೦ಟ್ರಲ್ ನ ಅದ್ಯಕ್ಷರಾದ ರಫ಼ೀಕ್ ದರ್ಬೆಯವರು ಮಾತನಾಡಿ ಮುಸಲ್ಮಾನರ ವರ್ಷದ ಮೊದಲ ತಿ೦ಗಳು ಮೊಹರ೦ ಆಗಿದ್ದು, ಈ ತಿಂಗಳ 10ನೇ ತಾರೀಕು ಉಪವಾಸ ವ್ರತ ಹಿಡಿಯುವ ಮೂಲಕ ದೇವನಿಗೆ ತ್ರಪ್ತಿ ಪಡಿಸುವೂದರೊಂದಿಗೆ ಗತಿಸಿದ ಹಲವಾರು ಮಹಾನರುಗಳ ರಕ್ಷಣೆಯೊಂದಿಗೆ ಆದಿಮಾನವ ಪ್ರವಾದಿ ಆದ೦ ನಿಂದ ಅಂತ್ಯಪ್ರವಾಧಿ ಮಹಮ್ಮದ್ ,ಪೈಗಂಬರರ ವರೆಗೆ ಮೊಹರ೦ 10ರ ಘಟನೆಗಳ ವಿವರಣೆ ನೀಡಿದರು.
ರೋಟರಿ ಕ್ಲಬ್ ಸ್ವರ್ಣದ ಅದ್ಯಕ್ಷರಾದ ವೆ0ಟಟ್ರಮಣ ಕಳ್ವಾಜೆ ರಾಕಿ ಹಬ್ಬದ ಬಗ್ಗೆ ಅನಾದಿ ಕಾಲದ ಸ್ನೇಹ ಮತ್ತು ರಕ್ಷಣೆಯ ಬಂದದ ವಿವರಣೆಯೊಂದಿಗೆ ಪ್ರತೀಯೊಬ್ಬರೂ ಪರಸ್ಪರ ರಾಕಿ ಕಟ್ಥುತ್ತಾ ಈ ಮಹತ್ವದ ರಾಕಿ ಸಂಬಂಧಗಳನ್ನು ಬೆಸೆಯುತ್ತಾ ಉತ್ತಮ ಬಾಂದವ್ಯ ಮತ್ತು ರಕ್ಷಣೆಯ ದಾರಿ ಬಗ್ಗೆ ವಿವರಿಸುತ್ತಾ, ತನ್ನ ನೆರೆಕರೆಯ ಮುಸ್ಲಿಮ್ ಕುಟುಂಬದ ಉತ್ತಮ ಸಂಪ್ರದಾಯವೊಂದನ್ನ ವಿವರಿಸುತ್ತಾ, ಹಿಂದೂ ಮುಸ್ಲಿಮ್ ಬಾವೈಕ್ಯತೆಯ ಮಹತ್ವವನ್ನು ವಿವರಿಸಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ರೋಟರಿ ಜ಼ಿಲ್ಲೆ ಝೊನ್ 5 ರ ಮಾಜಿ ಎ.ಜಿ ಸಂತೋಷ್ ಶೆಟ್ಟಿ 2 ಹಬ್ಬಗಳಿಗೆ ಸುಭ ಹಾರೈಸಿದರು, ಸ್ವರ್ಣದ ಮಾಜಿ ಅದ್ಯಕ್ಷೆ ಸೆನಿರಿಟೊ ಆನಂದ್, ರೋಟರಿ ಸೆ೦ಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ, ಸ್ವರ್ಣದ ಕಾರ್ಯದರ್ಶಿ ಸುರೇಶ್ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐಪಿಪಿ ರೋಟೆರಿಯನ್ ಬಾಸ್ಕರ ಕೋಡಿಂಬಾಳ ದನ್ಯವಾದ ಸಮರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.