(www.vknews.in) ಪುತ್ತೂರು ತಾಲೂಕಿನ ಪ್ರತಿಷ್ಠಿತ ಸಮಾಜಸೇವಾ ಸಂಸ್ಥೆ ಇ-ಫೌಂಡೇಶನ್ ಪುತ್ತೂರು (ಇ-ಫ್ರೆಂಡ್ಸ್) ವತಿಯಿಂದ 75 ನೇಯ ಸ್ವಾತಂತ್ರೋತ್ಸವ ಆಚರಣೆಯು ಇ-ಫೌಂಡೇಶನ್ ಕಛೇರಿ ಬಳಿ ನಡೆಯಿತು.
ಧ್ವಜಾರೋಹಣ ಕಾರ್ಯಕ್ರಮವನ್ನು ಇ-ಫೌಂಡೇಶನ್ ಅಧ್ಯಕ್ಷ ಹೈದರ್ ಚೊಯ್ಸ್ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮೀಟಿ ಅಧ್ಯಕ್ಷರಾದ LT ರಝಾಕ್ ಹಾಜಿ, ಇಂದು ಭಾರತದಲ್ಲಿ ಸ್ವಾತಂತ್ರ್ಯ ದಿನ ಮತ್ತು ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದೆ.⇒ 1947 ಆಗಸ್ಟ್ 15 ರಂದು ಬ್ರಿಟಿಷರ ಕಪಿಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಇಂದು ನಾವು ಮೊದಲು ಈ ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಎಲ್ಲವನ್ನೂ ಪಣಕ್ಕಿಟ್ಟ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ನಾವು ಮೊದಲನೆಯದ್ದಾಗಿ ಸ್ಮರಿಸಬೇಕು ಎಂದು ಹೇಳುತ್ತಾ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನೌಶಾದ್ ಹಾಜಿ ಬೊಳ್ವಾರ್, RP ರಝಾಕ್, ಜಮಾಲ್ ಬಪ್ಪಳಿಗೆ ಸ್ವಾತಂತ್ರೋತ್ಸವದ ಮಹತ್ವದ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಅಶ್ರಫ್ ಹಾಜಿ ಗೋಳಿಕಟ್ಟೆ, ಇಬ್ರಾಹಿಂ ಚೊಯ್ಸ್, ದೇವರಾಜ್, ಹಕೀಮ್ ಅಲ್-ಮದೀನಾ, ಬ್ಲಡ್ ಹೆಲ್ಪ್ ಲೈನ್ ನ ಅಲಿ ಗೋಳಿಕಟ್ಟೆ, ಲತೀಫ್ ಪರ್ಲಡ್ಕ ಮತ್ತು ಇ-ಫೌಂಡೇಶನ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಅತಿಥಿಗಳನ್ನು ಇಮ್ತಿಯಾಜ್ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಆರಿಫ್ ಸಾಲ್ಮರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.