ಕಲ್ಲಡ್ಕ (www.vknews.in) : ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ ತಂಡದ ನೂತನ ಪದಾಧಿಕಾರಿಗಳ ಆಯ್ಕೆಯು ಅಗಸ್ಟ್ 18 ರಂದು ಆನ್ಲೈನ್ ಝೂಮ್ ಮೀಟಿಂಗ್ ಮೂಲಕ ನಡೆಯಿತು. ತಂಡದ ನೂತನ ಗೌರವಾಧ್ಯಕ್ಷರಾಗಿ ಪತ್ರಕರ್ತರು ಸಮಾಜ ಸೇವಕರಾದಂತಹ ಲೆತೀಫ್ ನೇರಳಕಟ್ಟೆ ಅವರನ್ನು ನೇಮಕಮಾಡಲಾಯಿತು. ಅದೇ ರೀತಿ ಅಧ್ಯಕ್ಷರಾಗಿ ಅಫ್ರೀದ್ ಮೀಲಾದ್ ಅವರನ್ನು ಮರು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಫಾರೂಕ್ ಕಲ್ಲಡ್ಕ ಅವರನ್ನು ಆಯ್ಕೆ ಮಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಇರ್ಫಾನ್ ಕಲ್ಲಡ್ಕ, ಜೊತೆ ಕಾರ್ಯದರ್ಶಿಯಾಗಿ ಜಮಾಲ್(ನಾಚಿ) ಮತ್ತು ಹಾಸಿರ್ ಕಲ್ಲಡ್ಕ, ಖಜಾಂಚಿ ಬಾತಿಷ್ ಬಲ್ಲೆಕೋಡಿ, ಫೈಝಲ್ ಗೋಳ್ತಮಜಲು, ಅಪ್ರೀದ್ ಕೆ.ಎನ್, ಸಲಹೆಗಾರರಾಗಿ ಹಾರಿಸ್ ಅಮರ್, ಬಶೀರ್ ಕಲ್ಪನೆ, ನವಾಝ್ ಎನ್.ಕೆ, ಫಾರೂಕ್ ಪಟ್ಟೆಕೋಡಿ, ಅಶ್ರಫ್ ಟಿಕ್ಕಾ, ಇಲ್ಯಾಸ್ ಮಾಣಿಮಜಲು. ಮಾಧ್ಯಮ ಉಸ್ತುವಾರಿಗಳಾಗಿ ಝೈದ್ ಮುರಬೈಲ್, ಇರ್ಷಾದ್ ಗೂಡಿನಬಳಿ, ಸುಹೈಬ್ ಮೈದಾನ್, ಇರ್ಫಾನ್ ಕಲ್ಲಡ್ಕ.
ಸದಸ್ಯರಾಗಿ ನೌಫಲ್ (ಚಪ್ಪು), ಸೈಫ್ ಕಲ್ಲಡ್ಕ, ಷರೀಫ್ ಅಮ್ಟೂರು, ರಕ್ಷಿತ್ ಗೋಳ್ತಮಜಲು, ಉಬೈದ್ ಮಂಚಿ, ವರುಣ್, ಸುಜಯ್, ಸಿಯಾನ್ ಗಡಿಯಾರ್, ರಿಯಾಝ್ ಬೊಳ್ಳಾಯಿ, ಅಫ್ರಾಝ್ ಬೆಂಗಳೂರು, ಮುಜ್ಜ, ತಸ್ರೀಫ್ ಅವರನ್ನು ಆಯ್ಕೆ ಮಾಡಲಾಗಿದೆ.
ತಂಡದ ನೂತನ ಕಪ್ತಾನನಾಗಿ ಬಾತಿಷ್ ಬಲ್ಲೆಕೋಡಿ, ಸಹ ಕಪ್ತಾನನಾಗಿ ಸುಹಾನ್ ಮತ್ತು ತಂಡದ ಜವಾಬ್ದಾರಿಗಳಾಗಿ ಜಮಾಲ್ ಕಲ್ಲಡ್ಕ ಹಾಗೂ ನೂಮನ್ ಗೋಳ್ತಮಜಲು ಅವರನ್ನು ಆಯ್ಕೆ ಮಾಡಲಾಯಿತು.
ತಂಡದ ಮ್ಯಾನೇಜರ್ ಆಗಿ ಇರ್ಫಾನ್ ಕಲ್ಲಡ್ಕ ಮತ್ತು ಫಾರೂಕ್ ಕಲ್ಲಡ್ಕ, ತಂಡದ ತರಬೇತುದಾರರಾಗಿ ಇರ್ಷಾದ್ ಗೂಡಿನಬಳಿ ಹಾಗೂ ಫಾರೂಕ್ ಕಲ್ಲಡ್ಕ ರವರನ್ನು ಆಯ್ಕೆ ಮಾಡಲಾಯಿತು.
ಮಾಧ್ಯಮ ವಿಭಾಗ ಟಿಕ್ಕಾ ಪೋಯಿಂಟ್ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಕಲ್ಲಡ್ಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.