(www.vknews.in) : ಪಟ್ಟಿಕ್ಕಾಡ್ ಜಾಮಿಅಃ ನ್ಯೂರಿಯ್ಯಃ ಅರಬಿಕ್ ಕಾಲೇಜಿನಲ್ಲಿ ಕಲಿಯುತ್ತಿರುವ ಕೊಡಗು ಜಿಲ್ಲಾ ವಿದ್ಯಾರ್ಥಿಗಳ ಒಕ್ಕೂಟ KDSF ಇದರ ಮಾಸಿಕ ಮಜ್ಲಿಸುನ್ನೂರ್ ಉದ್ಘಾಟನಾ ಸಮಾರಂಭವು ಆಗಸ್ಟ್ 18 ಗುರುವಾರ ರಾತ್ರಿ ಜಾಮಿಅಃ ಕ್ಯಾಂಪಸ್ ನಲ್ಲಿ ನಡೆಯಿತು. ಸಯ್ಯಿದ್ ಮುಹಮ್ಮದ್ ಅಲ್ ಹಾದೀ ತಙಳ್ ಮಿತ್ತಬೈಲು ರವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ವಿದ್ಯಾರ್ಥಿ ಸಂಘಟನೆಯಾದ ನೂರುಲ್ ಉಲಮಾ ಇದರ ಮಜ್ಲಿಸುನ್ನೂರ್ ಅಮೀರ್ ಸಯ್ಯಿದ್ ರಿಝ್ವಾನ್ ತಙಳ್ ಪಿಣಂಗೋಡ್ ಉದ್ಘಾಟನೆ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ KDSF ಅಧ್ಯಕ್ಷರಾದ ಹನೀಫ್ ಕೊಡಗರಹಳ್ಳಿ , ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಬೀರ್ ಎಡಪಾಲ, ರವರುಗಳು ಭಾಷಣ ಮಾಡಿದರು. KDSF ಜೊತೆ ಕಾಯ೯ದರ್ಶಿ ಯಾಸರ್ ಉಮರ್ ಮಾದಾಪುರ ನಿರೂಪಿಸಿ ವಂದಿಸಿದರು.
ವರದಿ: ಕಮರುದ್ದೀನ್ ಶರಫಿ ಕುಂಜಿಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.