ಶಿಬಿರದಲ್ಲಿ ಉಚಿತವಾಗಿ ಆರೋಗ್ಯ ವಿಮಾ ಕಾರ್ಡ್ ಪಡೆದ ಸುಮಾರು 5000 ಫಲಾನುಭವಿಗಳು
ಮಂಗಳೂರು (ವಿಶ್ವಕನ್ನಡಿಗ ನ್ಯೂಸ್) : ಸಮಾಜ ಸೇವಕ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಉದ್ಯಮಿಯೂ ಆಗಿರುವ ಇನಾಯತ್ ಅಲಿ ಅವರ ಅಭಿಮಾನಿ ಬಳಗ ಗುರುಪುರ ವಲಯ ಹಾಗೂ ವತಿಯಿಂದ ಜನಸ್ನೇಹಿ ಕಾರ್ಯಕ್ರಮ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವು ಗುರುಪುರ ಗಂಜಿಮಠ ಒಂಡೇಲಾ ಸಭಾಂಗಣದಲ್ಲಿ ಜರುಗಿತು.
ಬೆಳಿಗ್ಗೆ ಆರಂಭವಾಗಿ ಸಂಜೆಯ ತನಕ ನಡೆದಂತಹ ಈ ಜನಸ್ನೇಹಿ ಕಾರ್ಯಕ್ರಮದಲ್ಲಿ ಹಲವಾರು ಫಲಾನುಭವಿಗಳು ಹಾಜರಿದ್ದು ಶಿಬಿರದ ಪ್ರಯೋಜನಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಉಚಿತವಾಗಿ ಸುಮಾರು ಎರಡು ಸಾವಿರಕ್ಕೂ ಮಿಕ್ಕಿದ ಜನರು ತಮ್ಮ ಆರೋಗ್ಯದ ತಪಾಸಣೆಗೈದರು.ಶ್ರೀನಿವಾಸ್ ಮೆಡಿಕಲ್ ಕಾಲೇಜಿನ ನುರಿತ ವೈದ್ಯರ ತಂಡವು ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಮುನ್ನಡೆಸಿದರು.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಇಎನ್ ಟಿ, ಕಣ್ಣಿನ ತಪಾಸಣೆ ಮತ್ತು ಅವಶ್ಯಕರಿಗೆ ಉಚಿತ ಕನ್ನಡಕ ಹಾಗೂ ಇತರ ವೈದ್ಯಕೀಯ ತಪಾಸಣೆಗಳು ಹಾಗೂ ಔಷಧಿಗಳನ್ನು ನೀಡಲಾಯಿತು.ಅಲ್ಲದೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ, ಆಯುಷ್ಮಾನ್ ಕಾರ್ಡ್ ನೋಂದಣಿ ಹಾಗೂ ಇತರ ಸೇವೆಗಳು ಶಿಬಿರದಲ್ಲಿ ಲಭ್ಯವಿತ್ತು.
ಕಾರ್ಯಕ್ರಮದ ಭಾಗವಾಗಿ ಇನಾಯತ್ ಅಲಿ ಫೌಂಡೇಷನ್ ವತಿಯಿಂದ ಸುಮಾರು ಐದು ಸಾವಿರ ಫಲಾನುಭವಿಗಳು ಉಚಿತ ಆರೋಗ್ಯ ವಿಮಾ ಕಾರ್ಡ್ ಪಡೆದರು. ಆಸ್ಪತ್ರೆಯ ದಾಖಲೆಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ಉಚಿತ ಆರೋಗ್ಯ ವಿಮಾ ಕಾರ್ಡ್ ವಿತರಿಸಿದ್ದು ಇದೇ ಮೊದಲು ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಹಾಗೂ ಒಳ ರೋಗಿಗಳಿಗೆ ಸುಮಾರು ಐವತ್ತು ಶೇಕಡಾ ವಿನಾಯಿತಿ ದೊರಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹನ್ನೆರಡು ನಿವೃತ್ತ ಶಿಕ್ಷಕರಿಗೆ ಹಾಗೂ ಹಿರಿಯ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು ಹಾಗೂ ಇಪ್ಪತ್ತನಾಲ್ಕು ಅತಿ ಬಡ ಕುಟುಂಬಗಳಿಗೆ, ಅಂಗವಿಕಲರಿಗೆ ಸಹಾಯ ಧನ, ಬಡ ಮಕ್ಕಳಿಗೆ ಉಚಿತ ಶಾಲಾ ಪುಸ್ತಕಗಳನ್ನು ವಿತರಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕದ್ರಿ ಮಂಜುನಾಥ ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಶ್ರೀ ವಿಠ್ಠಲದಾಸ ತಂತ್ರಿಗಳು ಉದ್ಘಾಟಿಸಿದರು.
ಧರ್ಮಗುರುಗಳಾದ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಫಾ| ಅಲ್ಬೆನ್ ರೋಡ್ರಿಗಸ್ ನೀರಡು ಚರ್ಚ್ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಡಾ| ಮೆಲ್ವಿನ್ ಡಿಸೋಜ, ಎಂ.ಜಿ. ಹೆಗ್ಡೆ, ಡಾ| ಸಿದ್ದೀಕ್ ಕೈಕಂಬ, ಚಂದ್ರಹಾಸ ಪೂಜಾರಿ, ಹಾಜಿ ನೌಷಾದ್ ಸೂರಲ್ಪಾಡಿ, ಕೃಷ್ಣ ಅಮೀನ್, ಯು.ಪಿ. ಇಬ್ರಾಹೀಂ, ಗಿರೀಶ್ ಆಳ್ವ, ಲಯನ್ಸ್ ಸ್ಟಾನಿ ಮಿರಿಂಡ, ಲಯನ್ಸ್ ಅಶಿತ್ ಹಾಗೂ ಸ್ಥಳೀಯ ಹಿರಿಯ ಮುಖಂಡರು ಮತ್ತು ಅಭಿಮಾನಿ ಬಳಗದ ಗೌರವಾಧ್ಯಕ್ಷ ಬಾಷಾ ಮಾಸ್ಟರ್, ಅಧ್ಯಕ್ಷ ಹಾಲಿಯಾರ್ ಇಕ್ಬಾಲ್, ಪದಾಧಿಕಾರಿಗಳಾದ ಹರಿಯಪ್ಪ ಮುತ್ತೂರು, ಚಂದ್ರಹಾಸ ಶೆಟ್ಟಿ, ಎಂ.ಎಸ್.ಮೋನು ಅಡ್ಡೂರು, ಮೊಹಮ್ಮದ್ ಅಝೀಝ್ ಕುಪ್ಪೆಪದವು, ಸುಕುಮಾರ್ ಅಮೀನ್ ಎಡಪದವು, ದಾಮೋದರ್ ಕುಳಾಲ್, ರಝಾಕ್ ಮಳಲಿ, ಸಂದೀಪ್ ಪೂಪಾಡಿಕಲ್ಲು, ರಾಜೇಶ್ ಕೈಕಂಬ, ಸರ್ಫರಾಝ್ ಮಳಲಿ, ಸಮೀರ್ ಸೂರಲ್ಪಾಡಿ ಹಾಗೂ ಒಝ್ವಾಲ್ಡ್ ಡಿಸೋಜಾ ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.