ಬರೇಲಿ (ವಿಶ್ವ ಕನ್ನಡಿಗ ನ್ಯೂಸ್) : ಉತ್ತರ ಪ್ರದೇಶದ ಬರೇಲಿಯಲ್ಲಿ, ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯ ಮೇಲ್ಛಾವಣಿ ಕುಸಿದು 8 ತಿಂಗಳ ಹೆಣ್ಣು ಮಗು ಸಾವನ್ನಪ್ಪಿದೆ.
ಸೋಮವಾರ ಪಚೌಮಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆ ಮುಖ್ಯಸ್ಥ ಸುನೀಲಕುಮಾರ್ ಕಶ್ಯಪ್ ಮಗು ಮಲಗಿದ್ದ ಹಾಸಿಗೆಯ ಪಕ್ಕದಲ್ಲಿ ಫೋನ್ ಚಾರ್ಜ್ ಮಾಡಲು ಇಟ್ಟು ಕೆಲಸಕ್ಕೆ ಹೋಗಿದ್ದರು.
ಮನೆಗೆ ಬೆಂಕಿ ತಗುಲಿ ಚಾವಣಿ ಹಾಸಿಗೆ ಮೇಲೆ ಬಿದ್ದ ಪರಿಣಾಮ ಮಗು ಸುಟ್ಟು ಕರಕಲಾಗಿದೆ. ಅಪಘಾತದ ವೇಳೆ ಸುನೀಲಕುಮಾರ್ ಅವರ ಪತ್ನಿ ಮತ್ತು 2 ವರ್ಷದ ಹಿರಿಯ ಮಗು ಮನೆಯಲ್ಲಿದ್ದರು. ಅಪಘಾತ ಸಂಭವಿಸಿದ ಕೂಡಲೇ ಸುಟ್ಟು ಕರಕಲಾದ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.