ಮಧ್ಯಪ್ರದೇಶ (ವಿಶ್ವ ಕನ್ನಡಿಗ ನ್ಯೂಸ್) : ಮಧ್ಯಪ್ರದೇಶದ ವರ್ವಾನಿ ಜಿಲ್ಲೆಯಲ್ಲಿ ಜ್ವರದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಅನಾಯಾಳನ್ನುಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆ ಸಂದರ್ಭದಲ್ಲಿ ಮಗುವಿಗೆ ರಕ್ತ ಪರೀಕ್ಷೆ ನಡೆಸಲು ವೈದ್ಯರು ಹೇಳಿದ್ದು, ಮಗುವಿನ ರಕ್ತದ ಸ್ಯಾಂಪಲ್ ಕಂಡು ವೈದ್ಯರು ದಂಗಾಗಿದ್ದಾರೆ.
ಆನಾರೋಗ್ಯದಿಂದ ರಕ್ತ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವಿಚಿತ್ರ ಪ್ರಕರಣವೋಂದು ಬೆಳಕಿಗೆ ಬಂದಿದ್ದು, ಮಗುವಿನ ರಕ್ತನಾಳಗಳಲ್ಲಿ ಕೆಂಪು ರಕ್ತದ ಬದಲು ಬಿಳಿ ರಕ್ತ ಹರಿಯುತ್ತಿತ್ತು. ಬಿಳಿ ಬಣ್ಣದ ರಕ್ತವನ್ನು ಪರೀಕ್ಷಿಸಿದ ಲ್ಯಾಬ್ ತಂತ್ರಜ್ಞರೂ ಆಶ್ಚರ್ಯಚಕಿತರಾದರು. ಈವರೆಗೂ ಅಂತಹ ರಕ್ತದ ಮಾದರಿಯನ್ನು ನೋಡದಿರುವುದೂ ಈ ಅಚ್ಚರಿಗೆ ಕಾರಣವಾಗಿತ್ತು.
ಅಲ್ಲಿಂದ ಮಗುವನ್ನು ಮಹಾರಾಷ್ಟ್ರದ ಧುಲಿಯಾಗೆ ಕರೆದುಕೊಂಡು ಹೋಗಿ, ಅಲ್ಲಿ ಕೂಡ ರಕ್ತ ಪರೀಕ್ಷೆ ನಡೆಸಿದ ವೇಳೆ ಬಿಳಿ ರಕ್ತ ಪತ್ತೆಯಾಗಿದೆ. ಬಳಿಕ ಅಲ್ಲಿನ ವೈದ್ಯರು ಚಿಕಿತ್ಸೆಗಾಗಿ ಮುಂಬೈನ ಕೆಇಎಂ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದಾರೆ. ಅಲ್ಲಿ ರಕ್ತದ ಮಾದರಿಯನ್ನು ಗಮನಿಸಿದ ಆಸ್ಪತ್ರೆ ವೈದ್ಯಾಧಿಕಾರಿಗಳು ರಕ್ತವನ್ನು ಮುಂಬೈನಿಂದ ಯುಕೆಗೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ. ರಕ್ತ ಪರೀಕ್ಷೆಯ ವರದಿ ನೋಡಿದಾಗ ಮಗುವಿನ ರಕ್ತದಲ್ಲಿ ಕೊಲೆಸ್ಟ್ರಾಲ್, ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.