ಬೇಗೂರು(ವಿಶ್ವಕನ್ನಡಿಗ ನ್ಯೂಸ್): ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ಬೇಗೂರು ತಾ.ಕಲಘಟಗಿ ಇಲ್ಲಿನ ವಿದ್ಯಾರ್ಥಿಗಳಾದ ಸಿದ್ದಪ್ಪ ನಿಗದಿ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಭಾಗ್ಯಜ್ಯೋತಿ ಉಳ್ಳಾಗಡ್ಡಿ 100 ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಶಿರಗುಪ್ಪಿಯಲ್ಲಿ ನಡೆದ ಜಿಲ್ಲಾ ಮಟ್ಟದ ಖೋ ಖೊ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢ ಶಾಲೆ ಬೇಗೂರು ತಾ.ಕಲಘಟಗಿ ದ್ವಿತೀಯ ಸ್ಥಾನ ಪಡೆದು, ಇದರಲ್ಲಿ ಕುಮಾರಿ ಪೂಜಾ ಶೇಟ್ಟೆಪ್ಪನವರ, ಕುಮಾರಿ ಐಶ್ವರ್ಯ ಮಿಕ್ಕಿತ, ಕುಮಾರಿ ಭಾಗ್ಯಜೋತಿ ಉಳ್ಳಾಗಡ್ಡಿ, ಇವರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರು ಶ್ರೀ I.G.ಹಿರೇಮಠ ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ, SDMC ಅಧ್ಯಕ್ಷ ರು, ಉಪಾಧ್ಯಕ್ಷರು ಮತ್ತು ಸದಸ್ಯರು ಶುಭ ಹಾರೈಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.