(www.vknews.in) : ವಿಜಯಪುರ- ಇಂಡಿ ತಾಲೂಕಿನ ಗುಂದವಾನ ಗ್ರಾಮದ ಕಬ್ಬಿನ ಹೊಲದಲ್ಲಿ ಹೆತ್ತು ಬೀಸಾಕಿದ ನವಜಾತ ಶಿಶು (ಗಂಡು ಮಗು) ವನ್ನು ರಕ್ಷಣೆ ಮಾಡಿದ ಝಳಕಿಯ 108 ಯಾಂಬುಲೆನ್ಸ ಸಿಬ್ಬಂದಿಯಾದ ನರ್ಸ್ ಶ್ರೀ ಧಾನೇಶ ಹಿರೆಮಠ ಹಾಗೂ ಚಾಲಕ ಶ್ರೀ ಭಾವುರಾಜ ಮಂಗಳವೇಡೆಯವರನ್ನು ಜನತೆ, ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಭಿನಂದಿಸಿದೆ.
ಇದೆ ಅಕ್ಟೋಬರ್ 09 ರ ರವಿವಾರದಂದು ಇಂಡಿ ತಾಲೂಕಿನ ಝಳಕಿ ಪಟ್ಟಣದ ಸಮೀಪದ ಗುಂದವಾನ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಮದ್ಯಾಹ್ನ ಎರಡು ಗಂಟೆಗೆ ಮಗು ಅಳುತ್ತಿರುವ ಸುದ್ದಿ ತಿಳಿದು 108 ಯಾಂಬುಲೆನ್ಸ ಸಿಬ್ಬಂದಿ ಸರಿಯಾದ ಸಮಯಕ್ಕೆ ತಲುಪಿ ಮಗುವಿಗೆ ಪ್ರಥಮ ಚಿಕಿತ್ಸೆ ನೀಡಿ ತಂದು ಝಳಕಿ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇವರ ಈ ರಕ್ಷಣಾ ಕಾರ್ಯಕ್ಕೆ ಇಲ್ಲಿನ ನಾಗರಿಕರು, ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಭಿನಂದಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.