ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಇಡುಕ್ಕಿಯ ಗಂಡನ ಮನೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿಯನ್ನು ಬಂಧಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶರತ್ ಶಶಿಕುಮಾರ್ (31) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಜುಲೈ ಹನ್ನೆರಡರಂದು ಈ ಘಟನೆ ನಡೆದಿತ್ತು. ಶರತ್ ಪತ್ನಿ ಶರಣ್ಯ (20) ಅಲಿಯಾಸ್ ರಮ್ಯಾ ಆತ್ಮಹತ್ಯೆ ಮಾಡಿಕೊಂಡವರು. ವಾಗಮಾನ್ ಪರಕಟ್ಟು ನಿವಾಸಿ ಶರಣ್ಯ ಶರತ್ ಅವರ ಎರಡನೇ ಪತ್ನಿ. ಕೌಟುಂಬಿಕ ಹಿಂಸೆಯಿಂದ ಶರಣ್ಯಾ ಸಾವನ್ನಪ್ಪಿದ್ದಾಳೆ ಎಂಬ ದೂರುಗಳು ಈಗಾಗಲೇ ಬಂದಿದ್ದವು.
ನಂತರ ಸಂಬಂಧಿಕರ ದೂರಿನ ಮೇರೆಗೆ ವಾಗಮಾನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಮ್ಯಾಗೆ ಶರತ್ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ನಂತರ ಪೊಲೀಸರು ಶರತ್ನನ್ನು ಬಂಧಿಸಿದ್ದಾರೆ.
ಶರತ್ ಮತ್ತು ಶರಣ್ಯ ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ಶರತ್ ನ ಮೊದಲ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಂಧಿತ ಶರತ್ ನನ್ನು ಪೊಲೀಸರು ಪೀರುಮೇಡು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಲಯ ಆತನನ್ನು ರಿಮಾಂಡ್ ಮಾಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.