(www.vknews.in) ಗುಡೇಕೋಟೆ’ ಕರ್ನಾಟಕದ ಇತಿಹಾಸದಲ್ಲಿ ಒಂದು ಮೈಲಿಗಲ್ಲಾಗಿದ್ದು, ಚಿತ್ರದುರ್ಗ ರಾಜವೀರ ಮದಕರಿನಾಯಕ ಮತ್ತು ಶ್ರೀ ಕೃಷ್ಣದೇವರಾಯರ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೊಳಪಟ್ಟ ಗಡಿಗಳಿಗೆ ಹೊಂದಿಕೊಂಡಿರುವ ಮಹೋನ್ನತ ಸಾಮ್ರಾಜ್ಯವಾಗಿದ್ದು ಕೂಡ್ಲಿಗಿ ತಾಲ್ಲೂಕಿನ ಬಹುಮುಖ್ಯವಾದ ಚಾರಿತ್ರ್ಯಾರ್ಹ ಸ್ಥಳವಾಗಿದ್ದು ಕೂಡ್ಲಿಗಿ ತಾಲ್ಲೂಕಿನ “ಚಾರಿತ್ರಿಕ ಕಣಜ” ಎಂತಲೇ ಪರಿಗಣಿಸಬಹುದು ಅಲ್ಲದೇ ವಿಜಯನಗರ ಸಾಮ್ರಾಜ್ಯದ ಪ್ರಬಲವಾದ ಪಾಳೆಪಟ್ಟುಗಳಲ್ಲಿ ಗುಡೇಕೋಟೆಯು ಒಂದು. ಗುಡೇಕೋಟೆಯ ಪಾಳೆಯಗಾರರು ವೈಭವದಿಂದ ಆಳ್ವಿಕೆ ನಡೆಸಿದ ಪೌರಾಣಿಕ ತಾಣ ‘ವೀರ ಒನಕೆ ಓಬವ್ವಳ ತವರು” ಮನೆಯೂ ಕೂಡ ಗುಡೇಕೋಟೆಯಾಗಿರುವುದು ಕೂಡ ಹೆಮ್ಮೆಯ ವಿಚಾರ. ಇಲ್ಲಿನ ‘ರಾಗಿ ಕಣಜ’, ‘ತುಪ್ಪದ ಕಣಜ’ & ‘ಭತ್ತದ ಕಣಜ’ ಗಳು ಈ ಸಾಮ್ರಾಜ್ಯದ ಅಭಿವೃದ್ಧಿಯ ಪರ್ವದ ಚಾರಿತ್ರ್ಯಾರ್ಹ ಅಂಶಗಳನ್ನು ಕಣ್ಣಿಗೆ ಕಟ್ಟಿಕೊಡುತ್ತವೆ. _”ಗುಡಿ & ಕೋಟೆಗಳಿಂದ ಅಂದರೆ ಕಲ್ಲುಬಂಡೆಗಳಿಂದ ಆವೃತ್ತವಾದ ಪ್ರದೇಶವೇ ಗುಡೇಕೋಟೆಯಾಗಿದೆ”._ ಇಲ್ಲಿನ ಕೋಟೆಯ ವಿನ್ಯಾಸ, ದೇವಾಲಯದ ಕಲೆ & ವಾಸ್ತುಶಿಲ್ಪ ಗಮನ ಸೆಳೆಯುವ ಶಿವ ಪಾರ್ವತಿಯ ವಿಗ್ರಹ ಮನೋಹರವಾದದ್ದು ಆ ಕಡಿದಾದ ಕಲ್ಲುಬಂಡೆಗಳಿಂದ ಆವೃತ್ತವಾದ ಭದ್ರವದ ಕೋಟೆ, ಧರೋಜಿ ಕರಡಿಧಾಮ, ದಟ್ಟವಾದ ಕಾನನ, ಚಿತ್ರ ವಿಚಿತ್ರವಾದ ಭಯಂಕರವಾದ ಕಲ್ಲುಬಂಡೆಗಳು, ‘ಅಣಬೆಕಲ್ಲು’ & ‘ಛತ್ರಿಮರದಾಕೃತಿ ಕಲ್ಲುಬಂಡೆ’ ಹಾಗೂ ಅಪಾರ ಪ್ರಮಾಣದ ಕರಡಿಗಳು ಗುಡೇಕೋಟೆಯ ಐತಿಹಾಸಿಕ ಮತ್ತು ಪ್ರಾಕೃತಿಕ ಸೌಂದರ್ಯವಾಗಿದೆ.
ಪಂಚಲಿಂಗದ ದರ್ಶನ ಪಡೆದು ಹಾಗೆಯೇ ಬಂಡೆಯ ದಾರಿಯಲ್ಲಿ ಕ್ರಮಿಸಿದರೆ ಸಾಕು ಅದೊಂದು ಅದ್ಭುತ ಚಾರಣದ ಜಾಗವೆನಿಸಿಬಿಡುತ್ತದೆ. ಇತ್ತೀಚಿಗೆ ಗುಡೇಕೋಟೆಯ ಸಮೀಪದ ಕುಮತಿ ಗ್ರಾಮದಲ್ಲಿಯೂ ನರಭಯಂಕರ ರಕ್ಕಸ ಕಲ್ಲುಗಳು ಪತ್ತೆಯಾಗಿದ್ದು ಪ್ರಾಚ್ಯ ವಸ್ತುಗಳ ಉತ್ಪನನ & ಸಂಶೋಧನೆಯ ಅಗತ್ಯವಿದೆ.
ಡಾ.ಪುನೀತ್ ರಾಜಕುಮಾರ್ ರವರು ‘ಗಂಧದಗುಡಿ’ ಎಂಬ ಅತ್ಯದ್ಭುತ ಸಾಕ್ಷ್ಯಚಿತ್ರ ಚಿತ್ರೀಕರಣದ ವೇಳೆ ನಮ್ಮ ಗುಡೇಕೋಟೆಯ ಅರಣ್ಯ ಪ್ರದೇಶದಲ್ಲಿಯೂ ಚಿತ್ರೀಕರಣ ನಡೆಸಿದ್ದು ಪ್ರಕೃತಿ ನಿರ್ಮಿತ ನಯನಮನೋಹರವಾದ ‘ಜೋಡಿಗಲ್ಲು’ & ” talking toys (ಮಾತನಾಡುವ ಬಂಡೆಗಳು) ಎಂದೇ ಪ್ರಸಿದ್ಧವಾದ ಈ ರಣಭಯಂಕರ ಬಂಡೆಗಳನ್ನು ಸೆರೆಹಿಡಿಯುವ ಮೂಲಕ ಈ ಭಾಗದ ಜನರ ಮತ್ತು ಚಾರಣಪ್ರಿಯರ ಸಂಭ್ರಮಾಶ್ಚರ್ಯಕ್ಕೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ನೋಡಲು ಥೇಟ್ ಗೊಂಬೆಗಳು ಮಾತನಾಡುತ್ತವೆಯೇನೋ ಎಂಬ ಭ್ರಾಮಕ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ.
ಡಾ.ಪುನೀತ್ ರಾಜಕುಮಾರ್ ಅವರ ಗಂಧದಗುಡಿ ಸಾಕ್ಷ್ಯಚಿತ್ರದ ಮೂಲಕ ಗುಡೇಕೋಟೆಯ ಜೋಡಿಗಲ್ಲುಗಳು ‘ಮಾತನಾಡುವ ಬಂಡೆಗಳಾಗಿವೆ”.
ಕೆ.ಶ್ರೀಧರ್ (ಕೆ.ಸಿರಿ) ಯುವ ಸಾಹಿತಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.