ಕೊಲ್ಕತ್ತಾ (ವಿಶ್ವ ಕನ್ನಡಿಗ ನ್ಯೂಸ್) : ಪಶ್ಚಿಮ ಬಂಗಾಳದಲ್ಲಿ ನಡೆದ 2 ನೇ ಎಸ್ಎಸ್ಎಫ್ ರಾಷ್ಟ್ರೀಯ ಸಾಹಿತ್ಯ ಉತ್ಸವದಲ್ಲಿ ಜಮ್ಮು ಮತ್ತು ಕಾಶ್ಮೀರವು ಕಲಾ ಪ್ರಶಸ್ತಿಯನ್ನು ಗೆದ್ದಿದೆ. ದೆಹಲಿ ಎರಡನೇ, ಕೇರಳ ಮೂರನೇ, ಹಾಗು ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಸಾಹಿತ್ಯ ಉತ್ಸವದಲ್ಲಿ ಜಮ್ಮು ಮತ್ತು ಕಾಶ್ಮೀರವು 422 ಅಂಕಗಳನ್ನು ಗಳಿಸಿತು.
ಸಾಹಿತ್ಯೋತ್ಸವದಲ್ಲಿ 26 ರಾಜ್ಯ ತಂಡಗಳು 82 ಸ್ಪರ್ಧೆಗಳಲ್ಲಿ ಸ್ಪರ್ಧಿಸಿದವು. ಡೆಲ್ಲಿ 267, ಕೇರಳ 244, ಕರ್ನಾಟಕ 212 ಪಾಯಿಂಟ್ಸ್ ಗಳಿಸಿದೆ. ಪಶ್ಚಿಮ ಬಂಗಾಳದ ಗ್ರಾಹಕ ವ್ಯವಹಾರಗಳ ಸಚಿವ ಬಿಪ್ಲಬ್ ಮಿತ್ರಾ ಅವರು ವಿಜೇತರಿಗೆ ಟ್ರೋಫಿಯನ್ನು ನೀಡಿದರು. ಇದರೊಂದಿಗೆ, ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್ಪುರ್ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಡೆದ ಸಾಹಿತ್ಯ ಉತ್ಸವವು ಕೊನೆಗೊಂಡಿದೆ.
ಸಮಾರೋಪ ಸಮಾರಂಭವನ್ನು ಸಚಿವ ಬಿಪ್ಲಬ್ ಮಿತ್ರಾ ಉದ್ಘಾಟಿಸಿದರು. ಎಸ್ ಎಸ್ ಎಫ್ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷ ಸಿ.ಪಿ.ಉಬೇದುಲ್ಲಾ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಬಲೂರ್ಘಾಟ್ ಪುರಸಭೆ ಅಧ್ಯಕ್ಷ ಅಶೋಕ್ ಮಿತ್ರಾ, ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿಪ್ಲಬ್ ಖಾ, ಸಾಮಾಜಿಕ ಕಾರ್ಯಕರ್ತ ಶಾರ್ದೂಲ್ ಮಿತ್ರಾ, ಜಿಲ್ಲಾ ಪಂಚಾಯತ್ ಸದಸ್ಯ ಮಾಫಿಜುದ್ದೀನ್ ಮಿಯಾ, ಆರೋಗ್ಯ ಸಮಿತಿ ಅಧ್ಯಕ್ಷ ಅಮ್ಜದ್ ಮಂಡಲ್, ಪಂಚಾಯತ್ ಸಮಿತಿ ಸದಸ್ಯ ರಾಜು ದಾಸ್ ಉಪಸ್ಥಿತರಿದ್ದರು.
ಎಸ್ಎಸ್ಎಫ್ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶೌಕತ್ ನಯೀಮಿ ಅಲ್ ಬುಖಾರಿ ವಂದನಾ ಭಾಷಣ ಮಾಡಿದರು. ಎಸ್ಎಸ್ಎಫ್ ರಾಷ್ಟ್ರೀಯ ಅಧ್ಯಕ್ಷ ಡಾ. ಪಿ.ಎ. ಫಾರೂಕ್ ನಯೀಮಿ, ಕಾರ್ಯದರ್ಶಿ ನೌಶಾದ್ ಆಲಂ ಮಿಸ್ಬಾಹಿ, ಹಣಕಾಸು ಕಾರ್ಯದರ್ಶಿ ಸುಹೈರುದ್ದೀನ್ ನೂರಾನಿ, ಕಾರ್ಯದರ್ಶಿಗಳಾದ ಸೈವುರ್ ರೆಹಮಾನ್ ರಜ್ವಿ, ಶರೀಫ್ ನಿಜಾಮಿ ಮತ್ತು ಆರ್.ಎಸ್.ಸಿ. ಗಲ್ಫ್ ಸಂಚಾಲಕ ಮುಹಮ್ಮದ್ ವಿ.ಪಿ.ಕೆ ಸಂಧರ್ಬೋಚಿತವಾಗಿ ಮಾತನಾಡಿದರು. 2023 ರ ಸಾಹಿತ್ಯ ಉತ್ಸವವನ್ನು ಆಂಧ್ರಪ್ರದೇಶದಲ್ಲಿ ನಡೆಸಲಾಗುವುದು ಎಂದು ಘೋಷಿಸಲಾಯಿತು.
ಮೂರು ದಿನಗಳ ರಾಷ್ಟ್ರೀಯ ಸಾಹಿತ್ಯ ಉತ್ಸವದಲ್ಲಿ 26 ರಾಜ್ಯಗಳ ಒಟ್ಟು 637 ಸೃಜನಶೀಲ ವ್ಯಕ್ತಿಗಳು ಭಾಗವಹಿಸಿದ್ದರು. ತಪ್ಪನ್ ನ ತೈವಾಬಾ ಗಾರ್ಡನ್ ನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಉರ್ದು, ಹಿಂದಿ, ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆಗಳಲ್ಲಿ ಸೃಜನಶೀಲ ಕಲೆಗಳ ಪ್ರದರ್ಶನಗಳು, ಬರವಣಿಗೆ ಮತ್ತು ರೇಖಾಚಿತ್ರಗಳನ್ನು ಪ್ರದರ್ಶಿಸಲಾಯಿತು. ರಾಷ್ಟ್ರೀಯ ಸಾಹಿತ್ಯೋತ್ಸವವು ಬಂಗಾಳದ ಹಳ್ಳಿಗಳ ಕ್ಷೇತ್ರಗಳಲ್ಲಿ ಸಂಗೀತ ಮತ್ತು ಬೌದ್ಧಿಕ ಚಿಂತನೆಗಳನ್ನು ಪಸರಿಸುವ ಮೂರು ಹಗಲು ಮತ್ತು ರಾತ್ರಿಗಳನ್ನು ಪ್ರಸ್ತುತಪಡಿಸಿತು. ದೇಶದ ಸಾಂಸ್ಕೃತಿಕ, ಭಾಷಿಕ ವೈವಿಧ್ಯತೆ ಮತ್ತು ಬೌದ್ಧಿಕ ಉತ್ಕೃಷ್ಟತೆಯ ಸಂಗಮವನ್ನು ರಚಿಸುವ ಮೂಲಕ ಉತ್ಸವಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
ಸಾಹಿತ್ಯೋತ್ಸವದ ಅಂಕಗಳು.. ಜಮ್ಮು ಮತ್ತು ಕಾಶ್ಮೀರ 422 ದೆಹಲಿ 267 ಕೇರಳ 244 ಕರ್ನಾಟಕ 212 ಮಧ್ಯಪ್ರದೇಶ 173 ಮಹಾರಾಷ್ಟ್ರ 133 ಪಶ್ಚಿಮ ಬಂಗಾಳ 133 ಗುಜರಾತ್ 130 ಆಂಧ್ರಪ್ರದೇಶ 125 ತೆಲಂಗಾಣ 118 ತಮಿಳುನಾಡು 106 ಉತ್ತರಾಖಂಡ 95 ಜಾರ್ಖಂಡ್ 92 ಅಂಡಮಾನ್ 72 ಬಿಹಾರ 72 ಉತ್ತರ ಪ್ರದೇಶ ಕೇಂದ್ರ 69 ಉತ್ತರ ಪ್ರದೇಶ ಪಶ್ಚಿಮ 66 ಪಂಜಾಬ್ 51 ತ್ರಿಪುರಾ 44 ಉತ್ತರ ಪ್ರದೇಶ ಪೂರ್ವ 44 ಹರ್ಯಾಣ 44 ರಾಜಸ್ಥಾನ 38 ಅಸ್ಸಾಂ 36 ಲಕ್ಷದ್ವೀಪ 35 ಒಡಿಶಾ 34 ಮಣಿಪುರ 30
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.