ಜೈಪುರ (ವಿಶ್ವ ಕನ್ನಡಿಗ ನ್ಯೂಸ್) : ರಾಜಸ್ಥಾನದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಸಾಲಿಹ್ ಮುಹಮ್ಮದ್ ಯುವತಿಯೊಂದಿಗೆ ಇರುವ ವಿಡಿಯೋ ಬಿಡುಗಡೆಯಾದ ನಂತರ, ಅಶೋಕ್ ಗೆಹ್ಲೋಟ್ ಕ್ಯಾಬಿನೆಟ್ ವಿರುದ್ಧ ರಾಜ್ಯ ಬಿಜೆಪಿ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ. ಕಾಂಗ್ರೆಸ್ ಸಚಿವರು ಮಹಿಳೆಯೊಂದಿಗೆ ಇರುವ ವಿಡಿಯೋ ಹೊರಬಿದ್ದಿರುವುದು ಇದೇ ಮೊದಲಲ್ಲ, ಸಲೀಹ್ ಮುಹಮ್ಮದ್ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಲೇಹ್ ಒಳ ಉಡುಪಿನಲ್ಲಿ ಯುವತಿಯೊಂದಿಗೆ ಇರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸಲೇಹ್ ಮುಹಮ್ಮದ್ ದಿವಂಗತ ಮಾಜಿ ಕ್ಯಾಬಿನೆಟ್ ಸಚಿವ ಮತ್ತು ಧಾರ್ಮಿಕ ಮುಖಂಡ ಗಾಜಿ ಫಕೀರ್ ಅವರ ಪುತ್ರ. ಅದಕ್ಕಾಗಿಯೇ ಅವರು ಸಚಿವರಾದರು. ಅವರ ಕುಟುಂಬ ಸೋನಿಯಾ ಗಾಂಧಿ ಅವರಿಗೆ ನಿಕಟವಾಗಿದೆ. ಅಶೋಕ್ ಗೆಹ್ಲೋಟ್ ಏನನ್ನೂ ಮಾಡಬಲ್ಲರು ಎಂದು ನನಗನಿಸುತ್ತಿಲ್ಲ’ ಎಂದು ಬಿಜೆಪಿಯ ರಾಷ್ಟ್ರೀಯ ಐಟಿ ವಿಭಾಗದ ಹೊಣೆ ಹೊತ್ತಿರುವ ಅಮಿತ್ ಮಾಳವೀಯ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.