ಹೊಸದಿಲ್ಲಿ (www.vknews.in) : ಭಾರತದ ಅತ್ಯಂತ ಹೆಚ್ಚು ವಿಶ್ವಸನೀಯ ಟೆಕ್ ಬ್ರ್ಯಾಂಡ್ ಆಗಿರುವ ಮತ್ತು 5ಜಿ ಬೆಂಬಲವಿರುವ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿರುವ ಭಾರತದ ಮೊದಲ ಬ್ರ್ಯಾಂಡ್ ಆಗಿರುವ ರಿಯಲ್ಮಿ, ಇಂದು ಎರಡು ಸ್ಮಾರ್ಟ್ಫೋನ್ಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ರಿಯಲ್ಮಿ 10 ಪ್ರೊ ಪ್ಲಸ್ 5ಜಿ ಮತ್ತು ರಿಯಲ್ಮಿ 10 ಪ್ರೊ 5ಜಿ ಫೋನ್ಗಳು ಆಕರ್ಷಕ ವಿನ್ಯಾಸ, ಅದ್ಭುತ ಡಿಸ್ಪ್ಲೇ, ಫ್ಲ್ಯಾಗ್ಶಿಪ್ ಕ್ಯಾಮೆರಾ, ಶಕ್ತಿಶಾಲಿ 5ಜಿ ಪ್ರೊಸೆಸರ್ಗಳನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 13 ಆಧಾರಿತ ರಿಯಲ್ಮಿ ಯುಐ 4.0 ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿವೆ.
ಎರಡು ಫೋನ್ಗಳ ಬಿಡುಗಡೆ ಸಂದರ್ಭ ಮಾತನಾಡಿದ ರಿಯಲ್ಮಿ ಇಂಡಿಯಾದ ಸಿಇಒ, ರಿಯಲ್ಮಿ ವಿಪಿ ಹಾಗೂ ರಿಯಲ್ಮಿ ಇಂಟರ್ನ್ಯಾಷನಲ್ ಬಿಸಿನೆಸ್ ಗ್ರೂಪ್ನ ಅಧ್ಯಕ್ಷರೂ ಆಗಿರುವ ಮಾಧವ ಸೇಠ್, “ರಿಯಲ್ಮಿ ಸಂಖ್ಯಾ ಸರಣಿಯು ನಮ್ಮ ಭಾರತ ಮತ್ತು ಜಾಗತಿಕ ಬಳಕೆದಾರರು ಒಪ್ಪಿಕೊಂಡ ಮತ್ತು ಗರಿಷ್ಠ ಮೆಚ್ಚುಗೆ ಗಳಿಸಿದ ಸರಣಿಗಳಲ್ಲೊಂದು. ದಾಪುಗಾಲಿನ ಹೆಜ್ಜೆಯ ತಂತ್ರಜ್ಞಾನದ ಮೂಲಕ ಯುವಜನಾಂಗವನ್ನು ಸಶಕ್ತವಾಗಿಸಬೇಕೆಂಬ ನಮ್ಮ ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಂದು ಸಂಖ್ಯಾ ಸರಣಿಯ ಉತ್ಪನ್ನದೊಂದಿಗೆ ಕನಿಷ್ಠ ಒಂದು ದಾಪುಗಾಲಿನ ಹೆಜ್ಜೆಯ ತಂತ್ರಜ್ಞಾನವೊಂದನ್ನು ಒದಗಿಸುತ್ತಿದ್ದೇವೆ.
ಇದು ಈ ಬೆಲೆಯ ಶ್ರೇಣಿಯಲ್ಲೇ ಅತ್ಯುತ್ತಮವಾದುದು. ರಿಯಲ್ಮಿ 10 ಪ್ರೊ ಸರಣಿಯ 5ಜಿ ಫೋನ್ಗಳೊಂದಿಗೆ, ಈ ಸಂಖ್ಯಾ ಸರಣಿಗೆ ಮತ್ತಷ್ಟು ಮಾರುಕಟ್ಟೆ ನಿರ್ಧರಿಸುವ ವೈಶಿಷ್ಟ್ಯಗಳನ್ನು ಸಂಖ್ಯಾ ಸರಣಿಗೆ ಸೇರ್ಪಡೆಗೊಳಿಸಿ, ಬಳಕೆದಾರರಿಗೆ ವೈಶಿಷ್ಟ್ಯಗಳ ಮಟ್ಟಿಗೆ ಪ್ರೀಮಿಯಂ ಮಟ್ಟದ ಅನುಭವವನ್ನು ಒದಗಿಸುವುದು ನಮ್ಮ ಗುರಿ. ಈ ಎರಡೂ ಫೋನ್ಗಳಲ್ಲಿ ಫ್ಲ್ಯಾಗ್ಶಿಪ್ ಮಟ್ಟದ ಡಿಸ್ಪ್ಲೇ ತಂತ್ರಜ್ಞಾನಗಳು ಮತ್ತು ಶಕ್ತಿಶಾಲಿ 5ಜಿ ಪ್ರೊಸೆಸರ್ಗಳಿದ್ದು, ಭಾರತದಲ್ಲಿ 5ಜಿಯನ್ನು ಜನರಿಗೆ ತಲುಪಿಸುವ ನಮ್ಮ ಬದ್ಧತೆಯನ್ನು ದೃಢಪಡಿಸುತ್ತದೆ. ಜಾಗತಿಕವಾಗಿ ನಾವು ಸಂಖ್ಯಾ ಸರಣಿಯ 5 ಕೋಟಿ ಬಳಕೆದಾರರ ಸಂಖ್ಯೆಯನ್ನು ತಲುಪಿದ್ದು, ಅದರಲ್ಲಿ 3 ಕೋಟಿ ಬಳಕೆದಾರರು ಭಾರತೀಯರು ಮತ್ತು ನಮ್ಮ ಬಳಕೆದಾರರು ರಿಯಲ್ಮಿ 10 ಪ್ರೊ ಸರಣಿಯ 5ಜಿ ಫೋನ್ಗಳನ್ನು ಕೂಡ ಅದ್ಭುತವಾಗಿ ಬರಮಾಡಿಕೊಳ್ಳುವರೆಂಬ ವಿಶ್ವಾಸ ನಮಗಿದೆ” ಎಂದರು.
ಈಗಾಗಲೇ ರಿಯಲ್ಮಿ ಕಂಪನಿಯು ಜಿಯೋ ಜೊತೆಗೆ ಕೈಜೋಡಿಸಿ 5ಜಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆವಿಷ್ಕಾರಗಳಲ್ಲಿ ಭಾಗಿಯಾಗಿದೆ. ಜಿಯೋ ಜೊತೆ ಪಾಲುದಾರಿಕೆಯೊಂದಿಗೆ ಟ್ರೂ 5ಜಿ ಅನುಭವಕ್ಕಾಗಿ ಉತ್ತಮ ಕೊಡುಗೆಗಳನ್ನು ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ಕೆಲವು ಆಯ್ದ ರಿಯಲ್ಮಿ ಶೋರೂಂಗಳಲ್ಲಿ ಟ್ರೂ 5ಜಿ ಅನುಭವ ಕೇಂದ್ರಗಳನ್ನು ಸ್ಥಾಪಿಸಲು ಜಿಯೋ ಜೊತೆ ಸಹಯೋಗ ನೀಡಿದ್ದೇವೆ. ಇದರಿಂದ ಪ್ರತಿಯೊಬ್ಬರೂ ರಿಯಲ್ಮಿ 10 ಪ್ರೊ ಸರಣಿಯು ಒದಗಿಸುವ ಸಂಪರ್ಕತೆಯ ಹೊಸ ಶಕೆಯನ್ನು ಅನುಭವಿಸುವಂತಾಗಲಿದೆ ಎಂದು ಅವರು ಹೇಳಿದರು.
ಜಿಯೋ ಪ್ಲ್ಯಾಟ್ಫಾರಂಸ್ ಲಿ. ಸಿಇಒ ಕಿರಣ್ ಥಾಮಸ್ ಮಾತನಾಡಿ, “ನಮ್ಮ ಪ್ರಮುಖ ಪಾಲುದಾರ ರಿಯಲ್ಮಿ ಜೊತೆಗೆ ಮತ್ತೊಂದು ಮೈಲಿಗಲ್ಲಾಗಬಲ್ಲ ಪಾಲುದಾರಿಕೆಗೆ ನಮಗೆ ನಿಜಕ್ಕೂ ಹರ್ಷವಾಗುತ್ತಿದೆ. ರಿಯಲ್ಮಿ 10 ಪ್ರೊ ಪ್ಲಸ್ನಂತಹಾ ಶಕ್ತಿಶಾಲಿ 5ಜಿ ಸ್ಮಾರ್ಟ್ಫೋನ್ನ ನಿಜವಾದ ಸಾಮರ್ಥ್ಯವೇನೆಂಬುದನ್ನು ಜಿಯೋದಂತಹ ಟ್ರೂ 5ಜಿ ನೆಟ್ವರ್ಕ್ನಿಂದ ಮಾತ್ರ ತಿಳಿಯಬಹುದು. ಈ ಪಾಲುದಾರಿಕೆಯ ಉದ್ದೇಶವೇ ಇದು. ಜಿಯೋ ಟ್ರೂ 5ಜಿ ಎಂಬುದು ಭಾರತದಲ್ಲಿ ಮಾತ್ರವೇ ಅಲ್ಲ, ಜಗತ್ತಿನಲ್ಲೇ ಅತ್ಯಾಧುನಿಕವಾದ ನೆಟ್ವರ್ಕ್ ಆಗಿದೆ. ಭಾರತದ ಏಕೈಕ ಟ್ರೂ 5ಜಿ ನೆಟ್ವರ್ಕ್ ಎಂದನ್ನಿಸಲು ಜಿಯೋ ಟ್ರೂ 5ಜಿಯಲ್ಲಿ ಮೂರು ಪಟ್ಟು ಹೆಚ್ಚು ಸೌಕರ್ಯಗಳಿವೆ:
ನಮ್ಮ ಗ್ರಾಹಕರಿಗಾಗಿ ರಿಯಲ್ಮಿ ಜೊತೆಗೆ ಅಪೂರ್ವವಾದ ಬಳಕೆದಾರ ಅನುಭವವನ್ನು ರಚಿಸುವ ನಿಟ್ಟಿನಲ್ಲಿ ನಾವು ನಿರೀಕ್ಷೆಯಲ್ಲಿದ್ದೇವೆ” ಎಂದರು.
ರಿಯಲ್ಮಿ 10 Pro+ 5G ವೈಶಿಷ್ಟ್ಯಗಳು
ಬೆಲೆ ಹಾಗೂ ಮಾರಾಟ ದಿನಾಂಕ:
(6+128GB)
No Cost EMI upto 6 months
Available at realme.com, Flipkart and stores near you
(8+128GB)
ರಿಯಲ್ಮಿ 10 Pro 5G
ರಿಯಲ್ಮಿ 10 Pro ಸರಣಿ 5G ಬೆಲೆ ಮತ್ತು ಮಾರಾಟ ದಿನಾಂಕ:
December 16, 12 noon
Available at
realme.com, Flipkart
And stores near you
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.