ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಣ್ಣೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ತಾಲಿಪರಂಬದ ಸಯ್ಯದ್ ನಗರದ ಶೆರಿಫಾಸ್ ನಿವಾಸಿ ಮಿಫ್ಸಾಲು ರೆಹಮಾನ್ (22) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ತಾಳಿಪರಂಬ 7ನೇ ಮೈಲಿಯಲ್ಲಿ ಸೋಮವಾರ ಮುಂಜಾನೆ 4 ಗಂಟೆಗೆ ಈ ಅಪಘಾತ ಸಂಭವಿಸಿದೆ.
ಪಾಲಕ್ಕಾಡ್ ನಿಂದ ಮಂಗಳೂರಿಗೆ ಹೊರಟಿದ್ದ ಕೆಎಲ್ 15ಎ 2332 ಸಂಖ್ಯೆಯ ಬಸ್ ಮಿಫ್ಸಾಲು ರೆಹಮಾನ್ ಪ್ರಯಾಣಿಸುತ್ತಿದ್ದ ಕೆಎಲ್ 59 ವಿ59 3495 ಬೈಕಿಗೆ ಡಿಕ್ಕಿ ಹೊಡೆದಿದೆ. ಮಿಫ್ಸಾಲು ಪರಿಯರಾಮ್ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ನಾಲ್ಕನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ಮೃತದೇಹವನ್ನು ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.