(www.vknews.in) ಶೈಖುನಾ ಮರ್ ಹೂಂ ಸುರಿಬೈಲು ಉಸ್ತಾದ್ ರಹ್ಮತುಲ್ಲಾಹಿ ಅಲೈಹಿ ರವರ ಪ್ರಧಾನ ಶಿಷ್ಯಂದಿರಲ್ಲಿ ಓರ್ವರಾದ ಸೇರಾಜೆ ಅಬ್ದುಲ್ ಹಮೀದ್ ಲತೀಫಿ ಉಸ್ತಾದರ ಸಿರಾಜುಲ್ ಹುದಾ ದರ್ಸ್ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಈ ಸುಂದರ ಸಮಯದಲ್ಲಿ, ಉಸ್ತಾದರ ಶಿಷ್ಯ ಸಂಘಟನೆಯಾದ ಸಿರಾಜುಲ್ ಹುದಾ ಓಲ್ಡ್ ಸ್ಟೂಡೆಂಟ್ಸ್ ಅಸೋಸಿಯೇಷನ್ ವತಿಯಿಂದ ಸಿಲ್ವರ್ ಜುಬಿಲಿ ಆಚರಿಸಿ ಉಸ್ತಾದರನ್ನು ಸನ್ಮಾನಿಸುವ ಸಮಾರಂಭವನ್ನು 2023 ಜನವರಿ 06 ಶುಕ್ರವಾರ ಸಂಜೆ 5:30 ತ್ವಾಹಾ ಮಸೀದಿ ಸೇರಾಜೆ, ಸುಂಕದಕಟ್ಟೆ ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆ ಡಿಸೆಂಬರ್ 7 ಬುಧವಾರದಂದು ಅಶ್ಅರಿಯ ಕ್ಯಾಂಪಸ್ ನಲ್ಲಿ ನಡೆಯಿತು.ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಮದಕ ತಂಙಳ್, ಚೇರ್ ಮ್ಯಾನಾಗಿ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯ,ಜನರಲ್ ಕನ್ವೀನರಾಗಿ ಸಿ.ಎಚ್ ಅಶ್ರಫ್ ಮದನಿ ಚೌಕ,ಕೊಶಾಧಿಕಾರಿಯಾಗಿ ಮುತ್ತಲಿಬ್ ಹಾಜಿ ನಾರ್ಶ, ವರ್ಕಿಂಗ್ ಕನ್ವೀನರಾಗಿ ಅಶ್ರಫ್ ಸಅದಿ ಮೊಂಟೆಪದವು, ಫೈನಾನ್ಸಿಯಲ್ ಸಮಿತಿ ಚೇರ್ ಮನಾಗಿ ಬಶೀರ್ ಹಾಜಿ ಕಂಡಿಗ, ಕನ್ವೀನರಾಗಿ ಖಾದರ್ ಮುಂಬಾಯಿ,ಪ್ರಚಾರ ಸಮಿತಿ ಚೇರ್ ಮನಾಗಿ ಅಸ್ಸಯ್ಯಿದ್ ಸಬಾಹುದ್ದೀನ್ ತಂಙಳ್ ಗಾಂಧಿನಗರ,ಕನ್ವೀನರಾಗಿ ರಝಾಕ್ ಕಂಡಿಗ, ಮೀಡಿಯಾ ಚೇರ್ ಮ್ಯಾನಾಗಿ ಹಕೀಂ ಕಳಂಜಿಬೈಲು, ಕನ್ವೀನರಾಗಿ ಸಿದ್ದೀಕ್ ಅಡ್ಕಸ್ಥಳ ರವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಹನೀಫಿ ನಿಡಿಗಲ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.