ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ನವೆಂಬರ್ 2022 ರವರೆಗೆ ಕೇಂದ್ರವು ಒಟ್ಟು 3,083 ಕೆಜಿ ಕಳ್ಳಸಾಗಣೆ ಚಿನ್ನವನ್ನು ವಶಪಡಿಸಿಕೊಂಡಿದೆ. ಇವುಗಳಲ್ಲಿ ಹೆಚ್ಚಿನದನ್ನು ಕೇರಳದಿಂದ ವಶಪಡಿಸಿಕೊಳ್ಳಲಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ 2,383 ಕೆಜಿ ಚಿನ್ನ, 2020 ರಲ್ಲಿ 2,154 ಕೆಜಿ ಮತ್ತು 2019 ರಲ್ಲಿ 3,673 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ವರ್ಷ ಇದುವರೆಗೆ 3,588 ಪ್ರಕರಣಗಳು ದಾಖಲಾಗಿವೆ.
ಈ ವರ್ಷದ ನವೆಂಬರ್ ವರೆಗೆ ಕೇರಳದಿಂದ 690 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 2021 ರಲ್ಲಿ 587 ಕೆಜಿ, 2020 ರಲ್ಲಿ 406 ಕೆಜಿ ಮತ್ತು 2019 ರಲ್ಲಿ 725 ಕೆಜಿ ವಶಪಡಿಸಿಕೊಳ್ಳಲಾಗಿದೆ. ಕೇರಳ ಹೊರತುಪಡಿಸಿ, ನವೆಂಬರ್ ವರೆಗೆ ಅತಿ ಹೆಚ್ಚು ಕಳ್ಳಸಾಗಣೆ ಚಿನ್ನವನ್ನು ಮಹಾರಾಷ್ಟ್ರ (474 ಕೆಜಿ), ತಮಿಳುನಾಡು (440 ಕೆಜಿ) ಮತ್ತು ಬಂಗಾಳದಿಂದ (369 ಕೆಜಿ) ವಶಪಡಿಸಿಕೊಳ್ಳಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕಳೆದ ಮೂರು ವರ್ಷಗಳಲ್ಲಿ ಮೂರು ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದೆ. ಅಕ್ರಮ ಸಾಗಣೆ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.