(www.vknews.in) ವಿಟ್ಲ: ಸುನ್ನೀ ಕೋ ಆರ್ಡಿನೇಷನ್ ಸಮಿತಿ ವಿಟ್ಲ ಇದರ ಅಧೀನದಲ್ಲಿರುವ ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ, ಉಚಿತ ಬಿ.ಪಿ, ಶುಗರ್ ಮತ್ತು ಬ್ಲಡ್ ಗ್ರೂಪ್ ಪರೀಕ್ಷೆ, ಹಾಗೂ ವಿಟ್ಲ ಪರಿಸರದ ಆಯ್ದ 10 ಕ್ಯಾನ್ಸರ್ ಮತ್ತು ಡಯಾಲಿಸಿಸ್ ರೋಗಿಗಳಿಗೆ ಸಹಾಯ ಹಸ್ತ ಕಾರ್ಯಕ್ರಮ
ಇದೇ ಬರುವ 18 ಡಿಸೆಂಬರ್ 2022 ರಂದು ವಿಟ್ಲ ಬ್ರೈಟ್ ಆಡಿಟೋರಿಯo ನಲ್ಲಿ ಮರ್ಹೂಂ ಅಬೂಬಕ್ಕರ್ (ಅಬ್ಬಕ್ಕ) ಮಂಗಿಲಪದವು ವೇದಿಕೆಯಲ್ಲಿ ನಡೆಯಲಿದೆ. ಸುನ್ನೀ ಕೋರ್ಡಿನೇಷನ್ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ಅಲ್’ಹಾಜ್ ಇಬ್ರಾಹಿಂ ಮದನಿ ಕಂಬಳಬೆಟ್ಟು ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಾಸನದ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ! ವಿ. ಕೆ ಅಬ್ದುಲ್ ಬಶೀರ್ ಜನಪ್ರಿಯ ಕಂಬಳಬೆಟ್ಟು ಉದ್ಘಾಟಿಸಲಿರುವರು, ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯ ಹಜ್ ಸಮಿತಿಯ ಮಾಜಿ ಸದಸ್ಯರಾದ ಕೆ. ಎಮ್. ಅಬೂಬಕ್ಕರ್ ಸಿದ್ದೀಕ್ ಮೊಂಟುಗೋಳಿ, ಹಾಗೂ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ ಸದಾಶಿವ ಸಂದೇಶ ಭಾಷಣ ಮಾಡಲಿರುವರು. ಅಲ್ಲದೇ ಧಾರ್ಮಿಕ, ಸಾಮಾಜಿಕ, ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಅದರ ಪ್ರಯುಕ್ತ ವೆನ್ಲೋಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗ ದಲ್ಲಿ ಕರ್ನಾಟಕ ಎಸ್ ಎಸ್ ಎಫ್ ಬ್ಲಡ್ ಸೈಬೋ 291 ನೇ ಬ್ರಹತ್ ರಕ್ತದಾನ ಶಿಬಿರ ನಡೆಯಲಿರುವುದು. ಹಾಗೂ ವಿ ಕೇರ್ ಲ್ಯಾಬೊರೇಟರೀಸ್ ವಿಟ್ಲ ಇವರ ಸಹಕಾರದೊಂದಿಗೆ ಉಚಿತ ಬಿ. ಪಿ. ಶುಗರ್ ಮತ್ತು ಬ್ಲಡ್ ಗ್ರೂಪ್ ಪರೀಕ್ಷೆ ನಡೆಯಲಿದೆ. ಅಲ್ಲದೆ ತಾಜುಲ್ ಉಲಮಾ ಆಂಬುಲೆನ್ಸ್ ಸಮಿತಿ ಇದರ ಸಮಾಜಮುಖಿ ಕಾರ್ಯಕ್ರಮಕ್ಕೆ ಮೆರುಗು ಎಂಬಂತೆ ವಿಟ್ಲ ಪರಿಸರದ ಆಯ್ದ ಹತ್ತು ಕ್ಯಾನ್ಸರ್ ಮತ್ತು ಡಯಾಲಿಸಸ್ ರೋಗಿಗಳಿಗೆ ಸಹಾಯ ಹಸ್ತ ಕೂಡ ನೀಡಲಾಗುಹುದು.ತಾವೆಲ್ಲರೂ ಸದ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು, ಕಾರ್ಯಕ್ರಮ ವನ್ನು ವಿಜಯ ಗೊಳಿಸಬೇಕೆಂದು ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.