(www.vknews.in) : ಉಳ್ಳಾಲದಲ್ಲಿ ಯಾವ ಪೊಲೀಸ್ ಅಧಿಕಾರಿಗಳು ಬಂದರೂ ಅಲ್ಲಿನ ಪ್ಯಾರೀಸ್ ಜಗಲಿಯಲ್ಲಿ ಠಳಾಯಿಸುತ್ತಿದ್ದ ಒಂದುವರೆ ಡಜನ್ ಬ್ರೋಕರ್ ಗಳು ಸರಿಯಾಗಿ ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲ. ಈ ಬ್ರೋಕರ್ ಗಳಿಂದಾಗಿ ಉಳ್ಳಾಲದಾದ್ಯಂತ ನಾನಾ ವಿಧದ ಸಮಾಜ ಘಾತುಕ ತಂಡಗಳು ಬೆಳೆಯಲು ಕಾರಣ. ಆದರೆ ಕೆ.ಸಿ. ಆಶೋಕನ್, ಮಂಜುನಾಥ ಶೆಟ್ಟಿ, ವಿಶ್ವನಾಥ ಪಂಡಿತ್, ಗಣಪತಿ, ಉದಯ ನಾಯಕ್, ಗೋಪಿಕೃಷ್ಣ ಮುಂತಾದವರು ಪೊಲೀಸ್ ಅಧಿಕಾರಿಗಳಾಗಿದ್ದ ಕಾಲದಲ್ಲಿ ಇವರಿಗೆಲ್ಲ ಅಂಕುಶ ಹಾಕಿದ್ದರು.
ಅವರ ನಿರ್ಗಮನದ ಈ ತಂಡಗಳು ಮತ್ತೆ ಬೆಳೆದು ಕೊಂಡವು. ಉಳ್ಳಾಲದ ಪರಿಸ್ಥಿತಿಯನ್ನರಿತ ಪೊಲೀಸ್ ವರಿಷ್ಠರು ಧೀರತೆಗೆ ಹೆಸರಾದ ಯುವ ಪೊಲೀಸ್ ಅಧಿಕಾರಿ ಶ್ರೀ ಸಂದೀಪ್ ರವರನ್ನು ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ರಾಗಿ ನಿಯೋಜಿಸಿದ ನಂತರ ಉಳ್ಳಾಲ ಇತಿಹಾಸವೇ ಬದಲಾಗ ತೊಡಗಿತು. ಕಳ್ಳತನ, ಜೂಜು, ದರೋಡೆ, ಮಾದಕ ವಸ್ತುಗಳ ಸಾಗಣೆ, ವೇಶ್ಯಾ ತರುಣಿಯರ ಜಾಲ, ಪುಂಡಾಟಿಕೆ, ಕಳ್ಳ ಸಾಗಾಣಿಕೆ ಇತ್ಯಾದಿ ಸಮಾಜಬಾಹಿರ ಚಟುವಟಿಕೆಗಳನ್ನು ಹತ್ತು ಹಲವು ಗ್ಯಾಂಗ್ ಗಳನ್ನು ಮಟ್ಟ ಹಾಕಿ ಈ ಗ್ಯಾಂಗ್ ಗಳ ಆಶ್ರಯದಾತರಾಗಿದ್ದ ಪೊಲೀಸ್ ಬ್ರೋಕರ್ ಗಳನ್ನು ಹತ್ತಿರ ಸುಳಿಯದಂತೆ ಮಾಡಿ ಯಾವ ಒತ್ತಡಕ್ಕೂ, ಅಮಿಷಕ್ಕೂ ಒಳಗಾಗದೆ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರ ಮೂಲಕ ಉಳ್ಳಾಲದ ಜನತೆ ಶಾಂತಿಯ ಸಿಟ್ಟುಸಿರು ಬಿಟ್ಟು ಬಾಳುವಂತಹ ವಾತಾವರಣ ನಿಮಾ೯ಣ ಮಾಡಿದಂತಹ ಇನ್ಸ್ ಪೆಕ್ಟರ್ ಶ್ರೀ ಸಂದೀಪ್ ರವರು.
ಈ ಹಿಂದೆ ಗಂಗೊಳ್ಳಿ, ಶಿವಮೊಗ್ಗ, ಹಾವೇರಿ, ಹಿರೆಕೆರೂರು, ಹುಬ್ಬಳ್ಳಿ ಮೊದಲಾದೆಡೆಗಳಲ್ಲಿ ಸೇವೆ ಸಲ್ಲಿಸಿ ದಕ್ಷ ಪೊಲೀಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಉಳ್ಳಾಲದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಶ್ರೀ ಸಂದೀಪ್ ರವರ ಸೇವಾವಧಿಯನ್ನು ಉಳ್ಳಾಲದಲ್ಲಿ ಇನ್ನಷ್ಟು ಕಾಲ ಮುಂದುವರಿಸ ಬೇಕೆಂದು ಶಾಂತಿ ಪ್ರಿಯ ಜನತೆ ಸರಕಾರವನ್ನು ಅಗ್ರ ಯಿಸುತ್ತಿದ್ದಾರೆ.
– ಶೇಕ್ ಪುತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.