(www.vknews.in) ಗೂನಡ್ಕ ತೆಕ್ಕಿಲ್ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮಹಮ್ಮದ್ ಇರ್ಫಾನ್, ಕಾರ್ಯದರ್ಶಿಯಾಗಿ ನಿಹ್ಮಾತುಲ್ಲಾ ಇಸಾಕ್ ಹಾಗೂ ಕೋಶಾಧಿಕಾರಿಯಾಗಿ ಉಬೈಸ್ ಪಿ ಯು ಆಯ್ಕೆ
ಗೂನಡ್ಕ ತೆಕ್ಕಿಲ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಭೆಯು ದಿನಾಂಕ 17.01.2022 ರಂದು ತೆಕ್ಕಿಲ್ ಶಾಲೆಯಲ್ಲಿ ನಡೆಯಿತು. ಮುಖ್ಯಶಿಕ್ಷಕಿ ಶ್ರೀಮತಿ ವಾಣಿ ಕೆ. ರವರ ಉಪಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘ ರಚಿಸಲಾಯಿತು. ಅಧ್ಯಕ್ಷರಾಗಿ ಮಹಮ್ಮದ್ ಇರ್ಫಾನ್ ಪೇರಡ್ಕ, ಕಾರ್ಯದರ್ಶಿಯಾಗಿ ನಿಹ್ಮಾತುಲ್ಲಾ ಇಸಾಕ್ ಗೂನಡ್ಕ, ಕೋಶಾಧಿಕಾರಿಯಾಗಿ ಉಬೈಸ್ ಪಿ ಯು ಗೂನಡ್ಕ, ಉಪಾಧ್ಯಕ್ಷರಾಗಿ ಜುವೈರಿಯಾ ಆಯ್ಕೆಯಾದರು. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹೆಚ್ಚಿನ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.