(ವಿಶ್ವ ಕನ್ನಡಿಗ ನ್ಯೂಸ್) : ತನ್ನ 370 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ಐತಿಹಾಸಿಕ ಸ್ಮಾರಕವಾದ ತಾಜ್ ಮಹಲ್ಗೆ 1.9 ಕೋಟಿ ರೂಪಾಯಿ ಪಾವತಿಸುವಂತೆ ಉತ್ತರ ಪ್ರದೇಶ ಸರ್ಕಾರ ನೋಟಿಸ್ ಕಳುಹಿಸಿದೆ. ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
15 ದಿನದೊಳಗೆ ಬಾಕಿ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಆದರೆ ಐತಿಹಾಸಿಕ ಸ್ಮಾರಕಗಳಿಗೆ ಆಸ್ತಿ ತೆರಿಗೆ ಅನ್ವಯವಾಗುವುದಿಲ್ಲ ಎಂದು ಎಎಸ್ ಐ ಅಧಿಕಾರಿಗಳು ವಿವರಿಸಿದ್ದಾರೆ. ವಾಣಿಜ್ಯ ಉದ್ದೇಶಕ್ಕೆ ನೀರು ಬಳಕೆಯಾಗದ ಕಾರಣ ನೀರಿನ ಟ್ಯಾಂಕ್ ಮುಚ್ಚುವ ನಿಯಮವಿಲ್ಲ.
ತಾಜ್ ಮಹಲ್ ಸುತ್ತಲೂ ಹಸಿರನ್ನು ಕಾಪಾಡಿಕೊಳ್ಳಲು ನೀರನ್ನು ಬಳಸಲಾಗುತ್ತದೆ. ಇದು ಮೊದಲ ನೋಟೀಸ್ ಆಗಿದೆ ಎಂದು ಎಎಸ್ಐ ಸೂಪರಿಂಟೆಂಡೆಂಟ್ ರಾಜ್ ಕುಮಾರ್ ಪಟೇಲ್ ಹೇಳಿದರು. ತಪ್ಪಾಗಿ ನೋಟಿಸ್ ಕಳುಹಿಸಿರುವ ಸಾಧ್ಯತೆ ಇದ್ದು, ಶೀಘ್ರ ಸರಿಪಡಿಸಲಾಗುವುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪುರಾತತ್ವ ಇಲಾಖೆ ಅಧಿಕಾರಿಗಳು ಇದುವರೆಗೆ ಮೂರು ನೋಟಿಸ್ಗಳನ್ನು ಸ್ವೀಕರಿಸಿದ್ದಾರೆ. ತಾಜ್ ಮಹಲ್ ಅಲ್ಲದೆ ಆಗ್ರಾ ಕೋಟೆಗೂ ತೆರಿಗೆ ಪಾವತಿಗೆ ಒತ್ತಾಯಿಸಿ ನೋಟಿಸ್ಗಳು ಬಂದಿವೆ. 5 ಕೋಟಿ ತೆರಿಗೆ ಪಾವತಿಸಬೇಕು ಎಂದು ನೋಟಿಸ್ನಲ್ಲಿ ಹೇಳಲಾಗಿದೆ.
ಇದೇ ವೇಳೆ ತಾಜ್ಮಹಲ್ ಒಳಗೊಂಡ ಪ್ರದೇಶದಲ್ಲಿ ತೆರಿಗೆ ಷರತ್ತುಗಳನ್ನು ನಿರ್ಧರಿಸಲು ಖಾಸಗಿ ಕಂಪನಿಯೊಂದನ್ನು ನಿಯೋಜಿಸಲಾಗಿದ್ದು, ಅವರು ನೋಟಿಸ್ ಕಳುಹಿಸಿರಬಹುದು ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.