(www.vknews.in)ಸರಕಾರಿ ಶಾಲೆಗಳ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ಹಿರಿದು. ಆದರೆ ಸಮುದಾಯವನ್ನು ಶಾಲೆಯ ಕಡೆಗೆ ಆಕರ್ಷಿಸಲು ಶಿಕ್ಷಕರು ಪೋಷಕರು ಮತ್ತು ಪೋಷಕರಿಂದ ಆಯ್ಕೆ ಆಗಿರುವ ಕಾನೂನಾತ್ಮಕ ಸಮಿತಿ ಎಸ್ಡಿಎಂಸಿ ಪೂರ್ಣವಾಗಿ ತೊಡಗಿಸಿ ಕೊಳ್ಳಬೇಕಿದೆ.
ಆ ಎಸ್ಡಿಎಂಸಿ ಗಳ ಚಟುವಟಿಕೆಗಳು ದಾನಿಗಳಾದ ಸಮುದಾಯವನ್ನು ಆಕರ್ಷಿಸುತ್ತದೆ.
ಅದಕ್ಕೆ ಉದಾಹರಣೆಯಾಗಿ ಕೊಡಪದವು ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರನ್ನು ಒಳಗೊಂಡ ತಂಡವು ಹಲವು ದಾನಿಗಳಿಂದ ಶಾಲೆಗೆ ಬೇಕಾದ ವಸ್ತುಗಳನ್ನು ದಾನದ ಮುಖಾಂತರ ಪಡೆದು ಕೊಂಡು ಶಾಲೆಯ ಮಕ್ಕಳಿಗೆ ಉಪಯುಕ್ತವಾದ ರೀತಿಯಲ್ಲಿ ಬಳಸಿ ಕೊಳ್ಳುತ್ತಾ ಇದೆ. ಶಾಲೆಯಲ್ಲಿ ಒಳ್ಳೆಯ ರೀತಿಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಗಳು ನಡೆಯುತ್ತಿದ್ದು ಹಿರಿಯ ವಿದ್ಯಾರ್ಥಿಗಳು ಅಲ್ಲಿಯ ಶಿಕ್ಷಕರಿಗೆ ಗೌರವ ಧನದ ವ್ಯವಸ್ಥೆ ಮಾಡುತ್ತಿದ್ದಾರೆ. ಅದರೊಂದಿಗೆ ವಿದೇಶದಲ್ಲಿರುವ ವಿಧ್ಯಭಿಮಾನಿಗಳು ಕೂಡ ಕೈ ಜೋಡಿಸುತ್ತಾ ಇದ್ದಾರೆ ಅದರೊಂದಿಗೆ ಮಕ್ಕಳಿಗೆ ದಿನಾ ಬೆಳಿಗ್ಗೆ ಬಿಸ್ಕಿಟ್ ವ್ಯವಸ್ತೆಯನ್ನು ಉದ್ಯಮಿ ಮಾಣಿ ಫಾರೂಕ್ ರವರು ಮಾಡುತ್ತಿದ್ದಾರೆ ಹಲವು ದಿನಗಳ ಮೊದಲು ಶಾಲೆಯ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ಕೂಡ ದಾನಿಗಳು ಉಚಿತ ಸಮವಸ್ತ್ರ ವಿತರಣೆ ಕೈ ಗೊಂಡಿದ್ದು, ತೀರಾ ಇತ್ತೀಚೆಗೆ 25000 ಬೆಲೆ ಬಾಳುವ ಸೌಂಡ್ ಬಾಕ್ಸ್ ಸೆಟ್ ಅನ್ನು ಅಲ್ಲಿಯ ರೋಟರಿ ಕ್ಲಬ್ ನವರು ಉದಾರ ಮನಸ್ಸಿನಿಂದ ಶಾಲೆಗೆ ನೀಡಿದ್ದು, ನಮ್ಮ ಮನಸ್ಸಿನಿಂದ ಮಾಯುವ ಮೊದಲೇ ಸ್ಥಳೀಯ ಪಂಚಾಯತ್ ಅಧ್ಯಕ್ಷರಾದ ರೇಷ್ಮಾ ಶಂಕರಿ ಹಾಗೂ ಸ್ಥಳೀಯ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ರವಿ ಶೆಟ್ಟಿ ಯವರ ಮುತುವರ್ಜಿಯಿಂದ ಶಾಲಾ ಮೈದಾನಕ್ಕೆ ಸೋಲಾರ್ ದೀಪ ಇಂದು ಮಾನ್ಯ ಶ್ರಿಯುತ ಕೃಷ್ಣ ಕಿರಣ್ ರವರು ಉದ್ಘಾಟಿಸಿ ದರೊಂದಿಗೆ ಅಳವಡಿಸಲಾಯಿತು ಹೀಗೆ ಶಾಲೆಗಳ ಆವಶ್ಯಕತೆಯ ಪಟ್ಟಿಯ ಕೆಲವು ವಸ್ತುಗಳು ಶಾಲೆಗೆ ಬಂದಾಗ ಅಗತ್ಯವಾಗಿ ಇನ್ನೂ ಬೇಕಾದ ಪಟ್ಟಿಯು ಕೂಡ ದಾನಿಗಳ ಸಹಕಾರವನ್ನು ಕಾಯುತ್ತಾ ಇದೆ. ಅದರಲ್ಲಿ ಶಾಲೆಯಲ್ಲಿ ವಿದ್ಯುತ್ ಶಕ್ತಿ ಯು ಕಡಿತ ಗೊಂಡಾಗ ಮಕ್ಕಳಿಗೆ ಅನುಕೂಲ ಆಗುವ ರೀತಿಯಲ್ಲಿ ಸೋಲಾರ್ ಇನ್ವರ್ಟರ್ ಎನ್ನುವ ಬೇಡಿಕೆ ಮೊದಲನೆಯ ಹಂತದಲ್ಲಿದ್ದು ಅದಕ್ಕಾಗಿ ದಾನಿಗಳ ಸಹಕಾರವನ್ನು ಶಾಲಾ ಪೋಷಕ ಪ್ರತಿನಿಧಿಗಳಾದ ಎಸ್ಡಿಎಂಸಿ,ಪೋಷಕರು ,ಶಿಕ್ಷಕರು ಮತ್ತು ಮಕ್ಕಳು ಬಯಸುತ್ತಾ ಇದ್ದಾರೆ.
ಶಾಲೆಯ ಆವಶ್ಯಕತೆ ಗೆ ಸ್ಪಂದಿಸಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುವುದರೊಂದಿಗೆ ಇನ್ನು ಮುಂದೆಯೂ ತಮ್ಮ ಸಹಕಾರವನ್ನು ಬಯಸುತ್ತೇವೆ. *ಉಮರ್ ಫಾರೂಕ್ ಎಸ್ಡಿಎಂಸಿ ಅದ್ಯಕ್ಷರು ಹಾಗೂ ಜಿಲ್ಲಾ ಎಸ್ಡಿಎಂಸಿ ಸಮನ್ವಯ ವೇದಿಕೆ ಉಪಾಧ್ಯಕ್ಷರು*
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.