(www.vknews.in)
ಕಾಟಿಪಳ್ಳದಲ್ಲಿ ಜಲೀಲ್ ಎಂಬ ಅಮಾಯಕ ಮುಸ್ಲಿಂ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಶಾಂತಿ ಸೌಹಾರ್ದತೆಯ ತಾಣವಾಗಿದ್ದ ಕರಾವಳಿಯಲ್ಲಿ ಇಂತಹ ಕೃತ್ಯಗಳು ಪದೇ ಪದೇ ನಡೆಯಲಿಕ್ಕಿರುವ ಕಾರಣ ಧರ್ಮ ರಾಜಕೀಯದ ಮೊರೆ ಹೋದ ರಾಜಕಾರಣಿಗಳು ಅಮಾನವೀಯ ಕೃತ್ಯಗಳಿಗೆ ಪ್ರಚೋದನೆ ನೀಡುವ ಹೇಳಿಕೆಗಳನ್ನು ನೀಡುತ್ತಿರುವುದು. ಮೂರು ಹತ್ಯೆಗಳಿಂದ ಭಯ ಭೀತರಾಗಿದ್ದ ಕರಾವಳಿಯ ನಾಗರಿಕರಲ್ಲಿ ಮತ್ತೊಂದು ಕೊಲೆಯ ಸುದ್ದಿ ಆತಂಕವನ್ನು ಮತ್ತು ಭಯವನ್ನು ಉಂಟು ಮಾಡಿದೆ. ಜಲೀಲ್ ರಂತಹ ಅಮಾಯಕರ ಜೀವದ ಮೇಲೆ ರಾಜಕಾರಣ ಮಾಡುತ್ತಿರುವ ಅಮಾನುಷಿಕ ಮನಸ್ಥಿತಿಯುಳ್ಳವರಿಂದ ಕರಾವಳಿಯ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಮುಂದಿನ ದಿನಮಾನಗಳಲ್ಲಿ ಸರಕಾರ ಹಾಗೂ ಮಾನವನ ಸಂರಕ್ಷಣೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಎಚ್ಚರವಹಿಸಿ ಸೂಕ್ತ ಕ್ರಮಗಳನ್ನು ರಾಜ್ಯಾದ್ಯಂತ ಕೈಗೊಳ್ಳಬೇಕಾಗಿದೆ. ಜಲೀಲ್ ಹತ್ಯೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ನ್ಯಾಯ ಸಿಗುವವರೆಗೂ ತೀವ್ರವಾದ ಹೋರಾಟದ ಅಗತ್ಯವಿದೆ ಎಂದು ಸಾಮಾಜಿಕ ಹೋರಾಟಗಾರ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.