ಭೋಪಾಲ್ (ವಿಶ್ವ ಕನ್ನಡಿಗ ನ್ಯೂಸ್) : ಮದುವೆಯಾಗಲು ನಿರಾಕರಿಸಿದ ಗೆಳತಿಯನ್ನು ಯುವಕನೊಬ್ಬ ನಡುರಸ್ತೆಯಲ್ಲೇ ಥಳಿಸಿದ ಘಟನೆ ನಡೆದಿದೆ. ನಂತರ ಪ್ರಕರಣದ ಆರೋಪಿಯ ಮನೆಯನ್ನು ಕೆಡವಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ಪೊಲೀಸರು ಬುಲ್ಡೋಜರ್ ಬಳಸಿ ಯುವಕನ ಮನೆಯನ್ನು ಕೆಡವಿದ್ದಾರೆ.
ಯುವಕನ ಚಾಲನಾ ಪರವಾನಗಿಯನ್ನೂ ರದ್ದುಪಡಿಸಲಾಗಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಥಳಿಸಿದ ದೃಶ್ಯಗಳು ವೈರಲ್ ಆದ ಬಳಿಕ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ರೇವಾ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಇಪ್ಪತ್ನಾಲ್ಕು ವರ್ಷದ ಪಂಕಜ್ ತ್ರಿಪಾಠಿ ಬಂಧಿತ ಆರೋಪಿ. ಹತ್ತೊಂಬತ್ತು ವರ್ಷದ ಹುಡುಗಿಯನ್ನು ತಕ್ಷಣವೇ ಮದುವೆಯಾಗುವಂತೆ ಪಂಕಜ್ ಕೇಳಿಕೊಂಡನು, ಆದರೆ ಹುಡುಗಿ ನಿರಾಕರಿಸಿದಳು. ನಂತರ ಅಮಾನುಷವಾಗಿ ಥಳಿಸಲಾಗಿದೆ ಎಂದು ವರದಿಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.