ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ಮದುವೆ ಸಮಾರಂಭದಲ್ಲಿ ಹಾಡು, ನೃತ್ಯ ಇದ್ದರೆ ಉತ್ತರ ಪ್ರದೇಶದ ಮುಸ್ಲಿಂ ವಿದ್ವಾಂಸರು ನಿಕಾಹ್ ಮಾಡಿ ಕೊಡುವುದಿಲ್ಲ. ಮದುವೆ ಸಮಾರಂಭಗಳಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದು ಇಸ್ಲಾಮಿಕ್ ಸಂಸ್ಕೃತಿಯ ಭಾಗವಲ್ಲ ಎಂದು ಖಾಜಿ ಇ ಶಹರ್ ಮೌಲಾನಾ ಆರಿಫ್ ಖಾಜ್ಮಿ ಸ್ಪಷ್ಟಪಡಿಸಿದ್ದಾರೆ. ಉಲಮಾ ಮತ್ತು ಧರ್ಮಗುರುಗಳ ಸಭೆಯನ್ನುದ್ದೇಶಿಸಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದರು.
ಮದುವೆ ಸಮಾರಂಭಗಳಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದು ಹೆಚ್ಚು ಹಣವನ್ನು ಖರ್ಚು ಮಾಡಿದಂತೆ ಮತ್ತು ಉಲೇಮಾಗಳು ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಅನಿಷ್ಟಗಳಿಂದ ಮುಕ್ತಗೊಳಿಸಲು ಬಯಸುತ್ತಾರೆ ಮತ್ತು ಹುಡುಗಿಯ ಕುಟುಂಬಕ್ಕೆ ಹೆಚ್ಚುವರಿ ಆರ್ಥಿಕ ಹೊರೆಯಾಗಬಾರದು ಎಂದು ಖಾಜ್ಮಿ ಹೇಳಿದರು.
ಈ ಹಿಂದೆಯೂ ಇದೇ ರೀತಿಯ ಫತ್ವಾಗಳನ್ನು ಮುಸ್ಲಿಂ ಧರ್ಮಗುರುಗಳು ಹೊರಡಿಸಿದ್ದರು. ಉತ್ತರ ಪ್ರದೇಶದ ದೇವ್ಬಂದ್ನಲ್ಲಿ ಇಸ್ಲಾಮಿಕ್ ವಿದ್ವಾಂಸರೊಬ್ಬರು ನಿಕಾಹ್ ಸಮಯದಲ್ಲಿ ಡಿಜೆ ಹಾಡುಗಳಿಗೆ ನೃತ್ಯ ಮಾಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ ಮತ್ತು ಖಾಜಿಗಳು ಅಂತಹ ಮದುವೆಗಳನ್ನು ನಡೆಸುವುದಿಲ್ಲ ಎಂದು ಹೇಳಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.