(ವಿಶ್ವ ಕನ್ನಡಿಗ ನ್ಯೂಸ್) : ನಟಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆಯಲ್ಲಿ ನಟ ಶೀಸನ್ ಖಾನ್ ಅವರ ಸಹೋದರಿ ಮತ್ತು ನಟಿ ಫಲಕ್ ನಾಸ್ ಮತ್ತು ತಾಯಿ ಭಾಗವಹಿಸಿದ್ದರು. ಸದ್ಯ ತುನೀಶಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶೀಸನ್ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಶೀಸನ್ನನ್ನು ಪೊಲೀಸರು ಬಂಧಿಸಿದ್ದಾರೆ. ಶೀಸನ್ ನ ಇಬ್ಬರು ಸಹೋದರಿಯರು ಮತ್ತು ತಾಯಿ ತುನೀಶಾಳನ್ನು ಕೊನೆಯ ಬಾರಿಗೆ ನೋಡಲು ಬಂದಿದ್ದರು. ತುನೀಶಾಳ ಮೃತದೇಹ ನೋಡಿ ಇಬ್ಬರೂ ಅತ್ತರು..
ಶೀಸನ್ ಮತ್ತು ತುನೀಶಾ ಪ್ರೀತಿಸುತ್ತಿರುವುದು ಎರಡೂ ಮನೆಯವರಿಗೆ ತಿಳಿದಿತ್ತು. ತುನೀಶಾ ಸಾವಿಗೆ ಎರಡು ವಾರಗಳ ಮೊದಲು, ಶೀಸನ್ ಸಂಬಂಧವನ್ನು ಕೊನೆಗೊಳಿಸಿದನು. ಸಂಬಂಧ ಕೊನೆಗಾಣಲು ಧರ್ಮ ಮತ್ತು ವಯಸ್ಸು ಕಾರಣ ಎಂಬುದು ಶೀಸನ್ ಹೇಳಿಕೆ. ಶೀಸನ್ ತುನೀಶಾ ಜೊತೆಗಿನ ಸಂಬಂಧವನ್ನು ಸಂಪೂರ್ಣವಾಗಿ ಕೊನೆಗಾಣಿಸಿರುವುದು ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ. ನಂತರದ ಮಾನಸಿಕ ಕಲಹದಿಂದ ತುನೀಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ತುನಿಶಾ ಮತ್ತು ಶೀಸನ್ ವಿವಿಧ ಧಾರ್ಮಿಕ ಪಂಥಗಳಿಗೆ ಸೇರಿದವರು. 20 ವರ್ಷ ವಯಸ್ಸಿನ ತುನೀಶಾ ಅವರಿಗಿಂತ ಶೀಸನ್ ಎಂಟು ವರ್ಷ ದೊಡ್ಡವರು. ದೂರದರ್ಶನದ ಧಾರಾವಾಹಿಯ ಚಿತ್ರೀಕರಣದ ವೇಳೆ ತುನೀಶಾ ಮತ್ತು ಶೀಸನ್ ನಡುವೆ ಜಗಳವಾಗಿತ್ತು. ಬಿಡುವಿನ ವೇಳೆಯಲ್ಲಿ ವಾಶ್ ರೂಂಗೆ ತೆರಳಿದ ನಟಿ ಅಲ್ಲಿ ನೇಣು ಬಿಗಿದುಕೊಂಡಿದ್ದಾಳೆ. ಮಾಹಿತಿ ತಿಳಿದು ಸೆಟ್ನಲ್ಲಿದ್ದವರು ಆಸ್ಪತ್ರೆಗೆ ದೌಡಾಯಿಸಿದರೂ ಆಕೆಯ ಪ್ರಾಣ ಉಳಿಸಲು ಸಾಧ್ಯವಾಗಿರಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.