ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಮದುವೆಯ ಮುನ್ನಾ ದಿನ ವಧು ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಮಲಪ್ಪುರಂನಲ್ಲಿ ನಡೆದಿದೆ. ಮಲಪ್ಪುರಂ ಪೆರಿಂತಲ್ಮಣ್ಣ ಪಥಾಯಿಕ್ಕರ ಶಾಲೆ ಪಾಡಿಯ ಕಿಷ್ಕೆತೇಲಿಯಲ್ಲಿ ಮುಸ್ತಫಾ ಮತ್ತು ಸೀನಂ ದಂಪತಿಯ ಪುತ್ರಿ ಫಾತಿಮಾ ಬತುಲ್ (19) ಮೃತರು. ಇಂದು ಮೂರ್ಕನಾಡು ಮೂಲದವರೊಂದಿಗೆ ವಿವಾಹ ನಡೆಯಲಿರುವ ವೇಳೆ ವಧು ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ 7 ಗಂಟೆಗೆ ಈ ದಾರುಣ ಘಟನೆ ನಡೆದಿದೆ.
ತನ್ನ ಸಂಬಂಧಿಕರೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಫಾತಿಮಾ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಫಾತಿಮಾರನ್ನು ಪೆರಿಂತಲ್ಮನ್ನೈ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆಯನ್ನು ಉಳಿಸಲಾಗಲಿಲ್ಲ. ಮೃತರು ತಂದೆ, ತಾಯಿ, ಸಹೋದರ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತದೇಹವನ್ನು ಇಎಂಎಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಂದು ಅಂತ್ಯಕ್ರಿಯೆ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.