ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಎರ್ನಾಕುಲಂ ತೇವಕಲ್ ನ ಫುಟ್ ಬಾಲ್ ಮೈದಾನದಲ್ಲಿ ಬಾಲಕನನ್ನು ಅಮಾನುಷವಾಗಿ ಥಳಿಸಿದ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೇವಕಲ್ ಮೂಲದ ಸುನೀತಾ ವಿರುದ್ಧ ಪ್ರಕರಣ ದಾಖಲಾಗಿದೆ. ಗಾಯಗೊಂಡಿರುವ ಮಗು ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದೆ. ತೆವಕಲ್ ನ ಕೋಲೋಟಿ ಮೂಲೆಯಲ್ಲಿ ಹನ್ನೊಂದು ವರ್ಷದ ಸಹದ್ ಎಂಬಾತನನ್ನು ಸುನೀತಾ ಬರ್ಬರವಾಗಿ ಥಳಿಸಿದ್ದಾರೆ. ಮೈದಾನದಲ್ಲಿ ಫುಟ್ಬಾಲ್ ಆಡುವಾಗ ಸುನೀತಾ ಅವರ ಮಗ ಮತ್ತು ಸಹದ್ ನಡುವೆ ಜಗಳವಾಗಿತ್ತು.
ಮಕ್ಕಳ ನಡುವಿನ ಜಗಳದಲ್ಲಿ ಸುನೀತಾ ಆರನೇ ತರಗತಿಯಲ್ಲಿ ಓದುತ್ತಿರುವ ತೇವಕಲ್ ಮೂಲದ ಸಹದ್ ಅಬ್ದುಲ್ ಸಲಾಂ ಎಂಬಾತನಿಗೆ ಅಮಾನುಷವಾಗಿ ಥಳಿಸಿದ್ದಾರೆ. ಹೊಡೆತದ ರಭಸಕ್ಕೆ ಸಹದ್ ಗಾಯಗೊಂಡಿದ್ದಾನೆ. ಸಹದ್ ನನ್ನು ಕಲಮಶ್ಶೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ವೈದ್ಯರು ತಜ್ಞರ ಪರೀಕ್ಷೆಗೆ ಒಳಪಡಿಸಿದ್ದಾರೆ. ಸಹದ್ ತಂದೆ ನೀಡಿದ ದೂರಿನ ಮೇರೆಗೆ ತ್ರಿಕಕ್ಕರ ಪೊಲೀಸರು ಸುನೀತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.