(www.vknews.in) ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಕೇಂದ್ರ ಜುಮಾ ಮಸೀದಿಯಲ್ಲಿ ಜನವರಿ 17ರಿಂದ 21ರ ತನಕ ಮಖಾಂ ಉರೂಸ್ ಹಾಗೂ ಧಾರ್ಮಿಕ ಮತ ಪ್ರಭಾಷಣ.
ಜನವರಿ 17ರಂದು ಕುಯ್ಯೊಡು ಉಮರ್ ಮುಸ್ಲಿಯಾರ್ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಪ್ರತಿದಿನ ರಾತ್ರಿ ಮುಖ್ಯ ಭಾಷಣಗಾರರಾಗಿ ಯುಕೆ ಹನೀಫ್ ನಿಝಾಮಿ ಕಾಸರಗೋಡು, ಅಬೂಬಕರ್ ಮುಸ್ಲಿಯಾರ್ ಪತ್ತನಾಪುರಂ, ಉಸ್ಮಾನ್ ರಾಝಿ ಬಾಖವಿ ಅಲ್ ಹೈತಮಿ, ಇಬ್ರಾಹಿಂ ಖಲೀಲ್ ಹುದವಿ ಕಾಸರಗೋಡು, ಹಾಫಿಲ್ ನಿಝಾಮುದ್ದೀನ್ ಅಝ್ಹರಿ ಅಲ್ ಖಾಸಿಮಿ ಕೇರಳ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಅಸ್ಸಯ್ಯಿದ್ ರಶೀದ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಬಂಬ್ರಾಣ ಅಬ್ದುಲ್ ಖಾದರ್ ಮುಸ್ಲಿಯಾರ್, ಅಬ್ದುಲ್ ಸಲೀಂ ಫೈಝಿ, ಕರ್ನಾಟಕ ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್, ರಾಜೇಶ್ ನಾಯಕ್, ರಮಾನಾಥ ರೈ, ಇನಾಯತ್ ಅಲಿ, ಇಲ್ಯಾಸ್ ಮುಹಮ್ಮದ್ ತುಂಬೆ, ಅಬ್ದುಲ್ ನಾಸೀರ್ ಲಕ್ಕಿಸ್ಟಾರ್, ಫಯಾಝ್ ಗೋಪಿ, ಅಬ್ದುಲ್ ಹಮೀದ್ ಬಾವುಂಞಿ, ಬಶೀರುದ್ದೀನ್ ಅನ್ವರ್ ಹಾಗೂ ಇನ್ನಿತರ ಉಲಮಾ ಉಮಾರ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.