ಜೈಪುರ (ವಿಶ್ವ ಕನ್ನಡಿಗ ನ್ಯೂಸ್) : ಒಂದೇ ರೀತಿಯ ಪರಿಸ್ಥಿತಿಯಲ್ಲಿ ಅವಳಿ ಸಹೋದರರು ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ. ರಾಜಸ್ಥಾನ ಮೂಲದ 26 ವರ್ಷದ ಸುಮೇರ್ ಸಿಂಗ್ ಮತ್ತು ಸೋಹನ್ ಸಿಂಗ್ ಅವರು ಸುಮಾರು 900 ಕಿಮೀ ಅಂತರದಲ್ಲಿ ಎರಡು ಸ್ಥಳಗಳಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸೋಹನ್ ಗುಜರಾತ್ನ ಸೂರತ್ನಲ್ಲಿ ವಾಸಿಸುತ್ತಿದ್ದರು. ಇಲ್ಲಿಂದ 900 ಕಿ.ಮೀ ದೂರದಲ್ಲಿರುವ ರಾಜಸ್ಥಾನದ ಬಾರ್ಮರ್ ನಲ್ಲಿ ಸುಮೇರ್ ವಾಸವಾಗಿದ್ದ. ಬುಧವಾರ ರಾತ್ರಿ ಸೂರತ್ನಲ್ಲಿರುವ ತಮ್ಮ ಮನೆಯ ಟೆರೇಸ್ನಿಂದ ಬಿದ್ದು ಸುಮೇರ್ ಸಿಂಗ್ ಮೃತಪಟ್ಟಿದ್ದಾರೆ. ಫೋನ್ ನಲ್ಲಿ ಮಾತನಾಡುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಸೋಹನ್ ತನ್ನ ಸಹೋದರನ ಸಾವಿನ ಸುದ್ದಿ ಕೇಳಿ ಗುಜರಾತ್ನಿಂದ ಮನೆಗೆ ಬಂದಿದ್ದಾನೆ. ನೀರು ತರಲು ಹೋಗಿದ್ದ ಸೋಹನ್ ಗುರುವಾರ ಬೆಳಗ್ಗೆ ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸೋಹನ್ ಸಾವು ಆತ್ಮಹತ್ಯೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೋಹನ್ ಜೈಪುರದಲ್ಲಿ ಎರಡನೇ ದರ್ಜೆಯ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಓದುತ್ತಿದ್ದರು. ಸುಮೇರ್ ರಾತ್ನಲ್ಲಿರುವ ಟೆಕ್ಸ್ಟೈಲ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರನ್ನೂ ಅವರ ಸ್ಥಳೀಯ ಗ್ರಾಮವಾದ ಸರ್ನೋ ಕಾ ತಾಲಾದಲ್ಲಿ ಒಂದೇ ಚಿತಾಗಾರದಲ್ಲಿ ದಹಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.