ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಎರಡು ಬೈಕ್ ಗಳ ನಡುವೆ ಡಿಕ್ಕಿಯಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಪೆರಿಯಟ್ಟುಕ್ಕಂ ಎಂಬಲ್ಲಿ ನಡೆದಿದೆ. ಮೃತರನ್ನು ಕುಣಿಯ ಚಾರುಂಬಾ ನಿವಾಸಿ ಮುಹಮ್ಮದ್ ರಫೀಕ್ (41) ಎಂದು ಗುರುತಿಸಲಾಗಿದೆ. ಜನವರಿ 1 ರಂದು ಮಧ್ಯಾಹ್ನ 1.30 ಕ್ಕೆ ಪೆರಿಯಟ್ಟುಕ್ಕಂನಲ್ಲಿ ಬೈಕುಗಳು ಡಿಕ್ಕಿ ಹೊಡೆದವು. ತೀವ್ರವಾಗಿ ಗಾಯಗೊಂಡಿದ್ದ ರಫೀಕ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ವಲಸಿಗನಾಗಿದ್ದ ರಫೀಕ್ ಇತ್ತೀಚೆಗೆ ಊರಿನಲ್ಲೇ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಪುನಃ ಕುವೈತಿಗೆ ಪ್ರಯಾಣಿಸಲು ವಿಮಾನ ಟಿಕೆಟ್ ಬುಕ್ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಬೇಕಲ್ ಪೊಲೀಸರು ತನಿಖೆ ನಡೆಸಿ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.
ಅಬ್ದುಲ್ ಹಮೀದ್ ಮತ್ತು ಬೀಫಾತ್ವಿಮಾ ಅವರ ಪುತ್ರರಾಗಿರುವ ಇವರು, ಪತ್ನಿ ಸುಬೈದಾ, ಮಕ್ಕಳಾದ ಮೊಹಮ್ಮದ್ ರಿಜ್ವಾನ್, ಲಾಹಿರ್ ಮತ್ತು ಫಾತ್ವಿಮತ್ ರಿಜ್ವಾನಾ, ಒಡಹುಟ್ಟಿದವರಾದ ಮುಹಮ್ಮದ್, ಖೈರುನ್ನೀಸಾ, ಸುಮಯ್ಯ, ಸಾಜಿದಾ ಮತ್ತು ದಿವಂಗತ ಹನೀಫ್ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.