(www.vknews.in) : ಆರ್ಥಿಕವಾಗಿ ಹಿಂದುಳಿದ ಲೋಕ ಮುಸಲ್ಮಾನರು ಉಮ್ರಾ ನಿರ್ವಹಿಸಲು ನೆರವಾಗಬೇಕೆಂಬ ಸದುದ್ದೇಶದಿಂದ ಹಾಗೂ ಸೌದಿ ಪ್ರವಾಸೋದ್ಯಮವನ್ನು ಮತ್ತಷ್ಟು ಸದೃಢ ಗೊಳಿಸುವ ನಿಟ್ಟಿನಲ್ಲಿ ಸೌದಿ ಏರ್ ಲೈನ್ಸ್ ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಅದೇನೆಂದರೆ ಪ್ರಪಂಚದ ಎಲ್ಲಾ ರಾಷ್ಟ್ರಗಳಿಂದ ‘ಸೌದಿಯ’ ಏರ್ ಲೈನ್ಸ್ ಮೂಲಕ ಸೌದಿ ಅರೇಬಿಯಾಗೆ ಪ್ರಯಾಣಿಸುವವರಿಗೆ ನಾಲ್ಕು ದಿನಗಳ (96 ತಾಸುಗಳ) ಟೂರಿಸ್ಟ್ ವೀಸಾವನ್ನು ನೀಡಲು ಸೌದಿ ಏರ್ ಲೈನ್ಸ್ ತೀರ್ಮಾನಿಸಿದೆ. ಈ ನಿಯಮವು ಅಂತಿಮ ಘಟ್ಟದಲ್ಲಿದ್ದು, ಅತೀ ಶೀಘ್ರದಲ್ಲೇ ಜಾರಿಗೆ ಬರಲಿದೆ.
ಈ ನಾಲ್ಕು ದಿನಗಳ ಟೂರಿಸ್ಟ್ ವೀಸಾ ಪಡೆದವರು ಸೌದಿಯ ಯಾವುದೇ ಪ್ರದೇಶಕ್ಕೆ ಪ್ರಯಾಣಿಸಬಹುದಾಗಿದ್ದು, ಪವಿತ್ರ ಕಾಬಾಲಯ ಸಂದರ್ಶಿಸಿ ಉಮ್ರಾ ನಿರ್ವಹಿಸಲು, ಪ್ರವಾದಿ ಮಸೀದಿ ಮದೀನಾ ಮುನವ್ವರವನ್ನೂ ಸಂದರ್ಶಿಸಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾದ ಯಾವುದೇ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲು ಇವರಿಗೆ ಅನುಮತಿಯನ್ನೂ ನೀಡಲಾಗಿದೆ. ಆದರೆ ಈ ಟೂರಿಸ್ಟ್ ವೀಸಾ ಪಡೆದವರು ಕೇವಲ 96 ತಾಸುಗಳು ಮಾತ್ರ ಸೌದಿಯಲ್ಲಿರಲು ಅನುಮತಿಸಲಾಗಿದ್ದು, ಯಾವುದೇ ವಿಸ್ರರಣೆಗೆ ಅವಕಾಶವಿರುವುದಿಲ್ಲ. ಕಾಲಾವಧಿ ಮೀರಿದಲ್ಲಿ ಭಾರೀ ದಂಡಕ್ಕೆ ವಿದೇಯರಾಗಬೇಕಾಗುತ್ತದೆ.
ಪ್ರಯಾಣಿಕರು ತಮ್ಮ ಪ್ರಯಾಣದ ಟಿಕೆಟ್ ಪಡೆಯುವ ವೇಳೆ ಈ ಟೂರಿಸ್ಟ್ ವೀಸಾ ಪಡೆಯಲು ಕೋರಿಕೆ ಸಲ್ಲಿಸಬೇಕಾಗಿದ್ದು, ಈ ವೀಸಾಕ್ಕೆ ಯಾವುದೇ ಹೆಚ್ಚಿನ ಶುಲ್ಕ ತೆರಬೇಕಾಗಿಲ್ಲ ಎಂದು ಸೌದಿಯ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರು ಟಿಕೆಟ್ ಖರೀದಿಸುವಾಗ ನಿಮಗೆ ವೀಸಾ ಅಗತ್ಯವಿದೆಯೇ ಎಂದು ಕೇಳಲಾಗುತ್ತದೆ. ಅಗತ್ಯವಿದೆಯೆಂದು ಹೇಳಿದರೆ ಮೂರು ನಿಮಿಷಗಳೊಳಗೆ ನಿಮಗೆ ನಾಲ್ಕು ದಿನಗಳ ಟೂರಿಸ್ಟ್ ವೀಸಾ ಲಭಿಸುತ್ತದೆ. ಅಲ್ಲದೆ ವೀಸಾವನ್ನು ಪಡೆಯಲು ಸೌದಿ ಆರೇಬಿಯಾದ ವಿದೇಶಾಂಗ ಸಚಿವಾಲಯದ ಯಾವುದೇ ವೆಬ್ ಸೈಟ್ ಸಂದರ್ಶಿಸುವ ಅಗತ್ಯ ಇರುವುದಿಲ್ಲ.
ಈ ಮೂಲಕ ಪ್ರಯಾಣಿಕರು ಬಹಳ ಸುಲಭ ಪ್ರಕ್ರಿಯೆಯ ಮೂಲಕ ತಮ್ಮ ಟಿಕೆಟ್ ನೊಂದಿಗೆ ವೀಸಾ ಪಡೆದು ಸೌದಿ ಅರೇಬಿಯಾವನ್ನು ಸಂದರ್ಶಿಸಬಹುದು, ಉಮ್ರಾ ಝಿಯಾರತ್ ನಿರ್ವಹಿಸಬಹುದು ಅಲ್ಲದೇ ಸೌದಿಯ ಯಾವುದೇ ಭಾಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ‘ನಿಮ್ಮ ಟಿಕೆಟ್ಟೇ ನಿಮ್ಮ ವೀಸಾ’ ಎಂಬ ಶೀರ್ಷಿಕೆಯೊಂದಿಗೆ ಸೌದಿ ಅರೇಬಿಯಾದ ಪ್ರವಾಸೋದ್ಯಮ ಇಲಾಖೆಯು ಪರಿಚಯಿಸುತ್ತಿರುವ ಈ ಯೋಜನೆಯು ಸೌದಿಯ ಪ್ರವಾಸೋದ್ಯಮವನ್ಮು ಸದೃಢ ಗೊಳಿಸುವುದಲ್ಲದೇ, ಅಲ್ಲಾಹನ ಭವನವನ್ನು ಸಂದರ್ಶಿಸಲು ಹಗಲಿರುಲು ಪ್ರಾರ್ಥಿಸುತ್ತಿರುವ ಅದೆಷ್ಟೊ ಬಡ ಹಾಗೂ ಮದ್ಯಮ ವರ್ಗದ ವಿಶ್ವಾಸಿಗಳಿಗೆ ಇದು ಸೌದಿ ಸರಕಾರದ ಬಹುದೊಡ್ಡ ಕೊಡುಗೆ ಎನ್ನಬಹುದು.
✍️ ಎಸ್.ಎ.ರಹಿಮಾನ್, ಮಿತ್ತೂರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.