(www.vknews.in) ಸೋಶಿಯಲ್ ಡೆಮಾಕ್ರೇಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ಮಂಗಳೂರು ವಿಧಾನ ಸಭಾ ಕ್ಷೇತ್ರ ಚುನಾವಣೆ ಪೂರ್ವ ಸಿದ್ದತಾ ಸಭೆಯು ಇಂದು ಜನವರಿ 19 ದೇರಳಕಟ್ಟೆ ಪಾರ್ಟಿ ಆಫೀಸ್ ನಲ್ಲಿ ನಡೆಯಿತು ಸಭೆಯ ಅಧ್ಯಕ್ಷತೆ ಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸಭೆಗೆ ಸೇರಿದವರನ್ನು ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಬೈದ್ ಅಮ್ಮೆಂಬಳ ಸ್ವಾಗತ ಮಾಡಿದರು. ಚುನಾವಣೆ ಪೂರ್ವ ಸಿದ್ದತಾ ಬಗ್ಗೆ ಸವಿಸ್ತಾರವಾಗಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಇವರು ಮಂಡಿಸಿದರು.
ಸಭೆಯಲ್ಲಿ ನವಾಝ್ ಉಳ್ಳಾಲ ರಾಜ್ಯ ಚುನಾವಣಾ ಉಪ ಉಸ್ತುವಾರಿಗಳು, ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಶ್ರಫ್ ಮಂಚಿ,ಕ್ಷೇತ್ರ ಸಮಿತಿ ಸದಸ್ಯರು ನೌಶಾದ್ ಕಲ್ಕಟ್ಟಾ, ಶುಹೈಲ್ ಉಳ್ಳಾಲ, ಆರೀಫ್ ಬೋಳಿಯಾರ್, ಕ್ಷೇತ್ರ ಸಮಿತಿ SDTU ಅಧ್ಯಕ್ಷರು ಅಬ್ದುಲ್ ರಹಿಮಾನ್ ಮುನ್ನೂರು, ಬ್ಲಾಕ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಗ್ರಾಮ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ, ಪಟ್ಟಣ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ನಗರ ಸಭಾ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸಲಾಂ ವಿದ್ಯಾನಗರ ಧನ್ಯವಾದ ಮಾಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.