ಕಾಞಂಗಾಡ್ (ವಿಶ್ವ ಕನ್ನಡಿಗ ನ್ಯೂಸ್) : ಹಣ್ಣುಗಳನ್ನು ಸಾಗಿಸುತ್ತಿದ್ದ ಪಿಕಪ್ ವ್ಯಾನ್ ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಚೆರುಪನಾಥಾಡಿ ನಿವಾಸಿ ದಿವಂಗತ ಅಬ್ದುಲ್ಲಾ ಮತ್ತು ಫಾತಿಮಾ ದಂಪತಿಯ ಪುತ್ರ ಯೂಸುಫ್ (33) ಎಂದು ಗುರುತಿಸಲಾಗಿದೆ. ಅವರ ಜೊತೆಗಿದ್ದ ಕೊಟ್ಟೋಡಿಯ ಸಿಯಾದಿನ್ (22) ಗಾಯಗೊಂಡವರು. ಸೋಮವಾರ ಬೆಳಿಗ್ಗೆ ೬.೪೦ ರ ಸುಮಾರಿಗೆ ಅಂಬಲತಾರದ ಪರಪಲ್ಲಿ ಬಳಿ ಅಪಘಾತ ಸಂಭವಿಸಿದೆ.
ಕುಟ್ಟಿಕೋಲ್ ನಿಂದ ಕಾಞಂಗಾಡ್ ಕಡೆಗೆ ಬರುತ್ತಿದ್ದ ಶಿಯಾ ಬಸ್ ಪಣತ್ತೂರು ಕಡೆಗೆ ಹೋಗುತ್ತಿದ್ದ ಪಿಕಪ್ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ದೃಶ್ಯಗಳು ಹೊರಬಂದಿವೆ. ಡಿಕ್ಕಿಯಲ್ಲಿ ಪಿಕಪ್ ವ್ಯಾನ್ ಒಳಗೆ ಸಿಲುಕಿದ್ದ ಯೂಸುಫ್ ರನ್ನು ಅಗ್ನಿಶಾಮಕ ದಳ ಮತ್ತು ಅಂಬಲತಾರಾ ಪೊಲೀಸರು ಸ್ಥಳೀಯರ ಸಹಾಯದಿಂದ ಹೊರತೆಗೆದಿದ್ದಾರೆ.
ಪಿಕಪ್ ನಲ್ಲಿದ್ದ ನಿಂಬೆ ಮತ್ತು ದ್ರಾಕ್ಷಿ ಸೇರಿದಂತೆ ಹಣ್ಣುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಬಸ್ಸಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಂಬಲತಾರ ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.