(www.vknews.in) ಮುಂಬೈ, ಫೆಬ್ರವರಿ 14,2023: ‘ಮಹಿಳಾ ಕ್ರಿಕೆಟ್ ಗೆ ಇದೊಂದು ಅತ್ಯಂತ ವಿಶೇಷ ದಿನ’ ಎಂದು ಮುಂಬೈ ಇಂಡಿಯನ್ಸ್ ಒಡತಿ ಶ್ರೀಮತಿ ನೀತಾ ಅಂಬಾನಿ ಅವರು ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ನ ಮಹತ್ವದ ಆಟಗಾರ್ತಿ ಯರ ಹರಾಜು ಪ್ರಕ್ರಿಯೆಯ ಬಳಿಕ ಪ್ರಶಂಸಿಸಿದ್ದಾರೆ.
‘ಹರಾಜು ಯಾವಾಗಲೂ ಉತ್ಸುಕ ಆಗಿರುತ್ತವೆ. ಆದರೆ ಈ ಹರಾಜು ನಿಜಕ್ಕೂ ವಿಶೇಷವಾದುದು. ಇದು ಮೊದಲ ಹರಾಜು (ಡಬ್ಲ್ಯೂಪಿಎಲ್ ನಲ್ಲಿ). ಹೀಗಾಗಿ ಇದು ಐತಿಹಾಸಿಕ ದಿನ. ಬರೀ ಹೆಸರು ಮತ್ತು ಅಂಕಿ ಅಂಶಗಳಿಗಿಂತ ಹೆಚ್ಚಾಗಿ ಮಹಿಳಾ ಕ್ರಿಕೆಟಿಗರ ಅಮೋಘ ಪ್ರತಿಭೆಯನ್ನು ಎಲ್ಲರೂ ಬೆಂಬಲಿಸುತ್ತಿರುವುದು ಮತ್ತು ಸಂಭ್ರಮಿಸುತ್ತಿರುವುದು ಅತ್ಯಂತ ಸಂತೋಷ ನೀಡುತ್ತಿದೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಶ್ರೀಮತಿ ನೀತಾ ಅಂಬಾನಿ ಅವರೊಂದಿಗೆ ಹರಾಜಿನಲ್ಲಿ ಆಕಾಶ್ ಅಂಬಾನಿ, ಎಂಐ ನಿರ್ವಹಣೆ ಯ ಜಾಗತಿಕ ಮುಖ್ಯಸ್ಥ ಮಹೇಲ ಜಯವರ್ಧನೆ, ಮಹಿಳಾ ತಂಡದ ಹೊಸ ತರಬೇತಿ ಬಳಗದ ಚಾರ್ಲೊಟ್ ಎಡ್ವರ್ಡ್ಸ್ (ಮುಖ್ಯ ಕೋಚ್), ಜೂಲನ್ ಗೋಸ್ವಾಮಿ(ಮೆಂಟರ್ ಮತ್ತು ಬೌಲಿಂಗ್ ಕೋಚ್) ಮತ್ತು ದೇವಿಕಾ ಪಾಲಷಿಕಾರ್ (ಬ್ಯಾಟಿಂಗ್ ಕೋಚ್) ಭಾಗವಹಿಸಿದ್ದರು. ಕ್ರೀಡೆಯ ಬಗ್ಗೆ ಪ್ಯಾಶನ್ ಮತ್ತು ಹೆಚ್ಚಿನ ಮಹಿಳೆ-ಹುಡುಗಿಯರು ಕ್ರೀಡೆ ಆಡುವಂತೆ ಪ್ರೋತ್ಸಾಹಿಸಲು ಬದ್ಧರಾಗಿರುವ ನೀತಾ ಅಂಬಾನಿ ಅವರು, ಹರಾಜಿನಲ್ಲಿ ಮಾಡಿಕೊಂಡ ಆಟಗಾರ್ತಿ ಯರ ಆಯ್ಕೆ ಮತ್ತು ಭಾರತ ತಂಡದ ನಾಯಕಿಯನ್ನು (ಹರ್ಮಾನ್ ಪ್ರೀತ್ ಕೌರ್) ಬೇಗನೆ ಸೆಳೆದುಕೊಂಡ ಬಗ್ಗೆ ಸಂತಸ ಹೊಂದಿದ್ದಾರೆ. ಜೊತೆಗೆ ನಾಟ್ (ಸೀವರ್-ಬೃಂಟ್), ಪೂಜಾ (ವಸ್ತ್ರಕಾರ್) ಮತ್ತು ಎಂಐ ಕುಟುಂಬ ಸೇರಿಕೊಂಡ ಎಲ್ಲ ಪ್ರತಿಭಾನ್ವಿತ ಮಹಿಳೆಯರ ಬಗ್ಗೆ ನಾವು ಖುಷಿ ಹೊಂದಿದ್ದೇವೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ. ‘ಮುಂಬರುವ ಐಪಿಎಲ್ ಆವೃತ್ತಿಯು ರೋಹಿತ್ ಶರ್ಮ ನಮ್ಮ ಫ್ರ್ಯಾಂಚೈಸಿಯ ನಾಯಕತ್ವ ವಹಿಸಿಕೊಂಡ ಹತ್ತನೇ ವಾರ್ಷಿಕೋತ್ಸವವನ್ನು ಕಾಣಲಿದೆ. ಇದೇ ಸಮಯದಲ್ಲಿ ನಾವು ಭಾರತ ಮಹಿಳಾ ತಂಡದ ನಾಯಕಿ ಹರ್ಮಾನ್ ಪ್ರೀತ್ ಕೌರ್ ಅವರನ್ನೂ ತಂಡಕ್ಕೆ ಸ್ವಾಗತಿಸುತ್ತಿದ್ದೇವೆ. ಇಬ್ಬರೂ ಅಪಾರ ಅನುಭವ, ವೃತ್ತಿಪರತೆ ಮತ್ತು ಗೆಲುವಿನ ಮಾನಸಿಕತೆ ಹೊಂದಿದ್ದಾರೆ. ಅವರು ನಮ್ಮ ತಂಡದ ಎಲ್ಲ ಯುವ ಆಟಗಾರ್ತಿ ಯರಿಗೆ ಸ್ಫೂರ್ತಿ. ಹೀಗಾಗಿ ಈ ಇಬ್ಬರನ್ನೂ ಹೊಂದಿರುವುದು ನಮ್ಮನ್ನು ಉತ್ಸುಕರನ್ನಾಗಿಸಿದೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ. ‘ಇತ್ತೀಚೆಗೆ ನಮ್ಮ 19ವಯೋಮಿತಿ ತಂಡ ಮಹಿಳೆಯರ ಟಿ20 ವಿಶ್ವಕಪ್ ಗೆದ್ದಿತು ಮತ್ತು ದೇಶಕ್ಕೆ ಅಪಾರ ಸಂಭ್ರಮ ತಂದಿತು. ಅವರಿಗೆ ನನ್ನ ಅಭಿನಂದನೆಗಳು. ನಮ್ಮ ಸೀನಿಯರ್ ಮಹಿಳಾ ತಂಡವೂ ಟಿ20 ವಿಶ್ವಕಪ್ ನಲ್ಲಿ ಆರಂಭಿಕ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾಗವಾಗಿರುವ ಮೊದಲ ಭಾರತೀಯ ಮಹಿಳೆ ಎನಿಸಿರುವ ನೀತಾ ಅಂಬಾನಿ ಅವರು, ಭಾರತೀಯ ಮಹಿಳಾ ಕ್ರೀಡೆಯಲ್ಲಿ ಡಬ್ಲ್ಯೂಪಿಎಲ್ ಒಂದು ಟರ್ನಿಂಗ್ ಪಾಯಿಂಟ್ ಆಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.