ರಾಯ್ಪುರ (ವಿಶ್ವ ಕನ್ನಡಿಗ ನ್ಯೂಸ್) : ಮದುವೆಯ ಆರತಕ್ಷತೆಗೆ ಮುನ್ನ ವಧು-ವರರು ತಮ್ಮ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಛತ್ತೀಸ್ಗಢದ ರಾಯ್ಪುರದಲ್ಲಿ ಈ ಘಟನೆ ನಡೆದಿದೆ. ಇಬ್ಬರ ನಡುವೆ ಜಗಳ ನಡೆದಿದ್ದು, ವರನು ತನ್ನ ವಧುವನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ಪ್ರಾಥಮಿಕ ತೀರ್ಮಾನ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಅಸ್ಲಾಂ (24) ಮತ್ತು ಕಂಗಾಶಾ ಬಾನು (22) ಭಾನುವಾರ ವಿವಾಹವಾದರು. ಮಂಗಳವಾರ ರಾತ್ರಿ ಆರತಕ್ಷತೆ ಏರ್ಪಡಿಸಲಾಗಿತ್ತು. ಇಬ್ಬರೂ ಕೋಣೆಯಲ್ಲಿ ಇದಕ್ಕಾಗಿ ತಯಾರಿ ನಡೆಸುತ್ತಿದ್ದರು. ವಧುವಿನ ಕೂಗು ಕೇಳಿ ವರನ ತಾಯಿ ಅಲ್ಲಿಗೆ ಧಾವಿಸಿದರು. ಕೋಣೆ ಒಳಗಿನಿಂದ ಬೀಗ ಹಾಕಿತ್ತು. ಎಷ್ಟು ಹೊತ್ತಾದರೂ ಕರೆ ಮಾಡಿದರೂ ಬಾಗಿಲು ತೆರೆಯದ ಕಾರಣ ಕಿಟಕಿಯಿಂದ ನೋಡಿದರು. ಆಗ ಇಬ್ಬರೂ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದರು.
ನಂತರ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಮೈಮೇಲೆ ಹಲವಾರು ರಕ್ತಗಾಯಗಳಿದ್ದವು. ಗಾಯವನ್ನು ಉಂಟುಮಾಡಲು ಬಳಸಿದ ಆಯುಧವನ್ನು ಪೊಲೀಸರು ಕೊಠಡಿಯಿಂದ ವಶಪಡಿಸಿಕೊಂಡಿದ್ದಾರೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.