• ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್ ನ ಉಪಕ್ರಮದ ಮೂಲಕ ಈ ಒಡಂಬಡಿಕೆಯ ಎಂಪವರ್ ಮೂಲಕ ನಿಮ್ಹಾನ್ಸ್ ಭಾರತದಾದ್ಯಂತ ಟೆಲಿ ಮಾನಸ್ಗೆ ಅನುಷ್ಠಾನ ಪಾಲುದಾರರಲ್ಲಿ ಒಂದಾಗಿ ನೇಮಕವಾಗಿದೆ
• ಈ ಒಡಂಬಡಿಕೆಯು ಎಂಪವರ್ಗೆ ಟೆಲಿ ಮಾನಸ್ ಸೇವೆಗಳನ್ನು ಟೆಲಿ ಮಾನಸ್ ಸೆಲ್ಗಳಲ್ಲಿ ಹೆಚ್ಚುವರಿಯಾಗಿ ನಿರ್ವಹಿಸಲು ರಾಜ್ಯ ಸರ್ಕಾರಕ್ಕೆ ಪರಿಣಿತ ಸಂಪನ್ಮೂಲ ಬೆಂಬಲ ವಿಸ್ತರಿಸಲು ನೆರವಾಗಲಿದೆ
(www.vknews.in) ; ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್ ನ ಮಾನಸಿಕ ಆರೋಗ್ಯ ಉಪಕ್ರಮ ಎಂಪವರ್ ಇಂದು ನಿಮ್ಹಾನ್ಸ್(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಅಂಡ್ ನ್ಯೂರೋ ಸೈನ್ಸಸ್ನೊಂದಿಗೆ) ಒಡಂಬಡಿಕೆಗೆ ಸಹಿ ಹಾಕಿದ್ದು ಭಾರತದಾದ್ಯಂತ ಟೆಲಿ-ಮಾನಸ್ ಸೇವೆಗಳ ಅನುಷ್ಠಾನಕ್ಕೆ ಬೆಂಬಲಿಸಲಿದೆ. ಈ ಸಹಯೋಗದ ಭಾಗವಾಗಿ ಎಂಪವರ್ ಟೆಲಿ ಮಾನಸ್ ಕೇಂದ್ರಗಳ ದೈನಂದಿನ ವ್ಯವಹಾರಗಳನ್ನು ಸ್ಥಾಪಿಸುವ, ನಿರ್ವಹಿಸುವ ಮತ್ತು ಕಾರ್ಯಾಚರಣೆ ಮಾಡುವ ಜವಾಬ್ದಾರಿ ಹೊಂದಿರುತ್ತದೆ.
ನಿಮ್ಹಾನ್ಸ್ ಮತ್ತೊಂದೆಡೆ ಎಂಪವರ್ಗೆ ಈ ಪ್ಲಾಟ್ಫಾರಂಗೆ ಲಭ್ಯತೆ ನೀಡುತ್ತದೆ, ಕಾರ್ಯ ನಿರ್ವಹಣೆಯ ಮಾರ್ಗಸೂಚಿಗಳು ಮತ್ತು ಈ ಕೇಂದ್ರಗಳನ್ನು ನಿರ್ವಹಿಸಲು ಅಗತ್ಯವಾಗಿರುವ ಚೌಕಟ್ಟು ಒದಗಿಸುತ್ತದೆ. ಈ ಒಡಂಬಡಿಕೆಗೆ ಎಂಪವರ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಡಾ.ನೀರಜಾ ಬಿರ್ಲಾ ಮತ್ತು ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್ ನ ನಿರ್ದೇಶಕಿ ಹಾಗೂ ಸೈಕಿಯಾಟ್ರಿಯ ಹಿರಿಯ ರೊಫೆಸರ್ ಡಾ. ಪ್ರತಿಮಾ ಮೂರ್ತಿ, ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್ನ ಟ್ರಸ್ಟೀ ಶ್ರೀ ಆಶಿಶ್ ಸಂಘಿ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ(ಎನ್ಎಚ್ಎಂ-II)ದ ನಿರ್ದೇಶಕಿ ಡಾ.ನೇಹಾ ಗಾರ್ಗ್ ಉಪಸ್ಥಿತರಿದ್ದರು.
ಎಂಪವರ್ ಸರಿಸಾಟಿ ಇರದ, ಪ್ರಮಾಣೀಕರಣ ಮತ್ತು ವಿಶ್ವ ಮಟ್ಟದ ಮಾನಸಿಕ ಆರೋಗ್ಯ ಸೇವೆಗಳನ್ನು ಟೆಲಿ ಮಾನಸ್ ಫಲಾನುಭವಿಗಳಿಗೆ ಒದಗಿಸುತ್ತದೆ. ಈ ಸಹಯೋಗವು ಟೆಲಿ-ಮಾನಸ್ ಸೇವೆಗಳ ಯಶಸ್ವಿ ಆನ್-ಗ್ರೌಂಡ್ ಅನುಷ್ಠಾನ ದೃಢೀಕರಿಸುತ್ತದೆ ಅಲ್ಲದೆ ಮಾನಸಿಕ ಆರೋಗ್ಯ ಕೌನ್ಸೆಲ್ಲಿಂಗ್ ಸೇವೆಗಳಲ್ಲಿ ತರಬೇತಿ ಹೊಂದಿದ ಮತ್ತು ವೃತ್ತಿಪರರ ಲಭ್ಯತೆ ನೀಡುತ್ತದೆ.
ಈ ಸಹಯೋಗ ಕುರಿತು ಎಂಪವರ್ ಹಾಗೂ ಆದಿತ್ಯ ಬಿರ್ಲಾ ಎಜುಕೇಷನ್ ಟ್ರಸ್ಟ್ನ ಸಂಸ್ಥಾಪಕ ಮತ್ತು ಅಧ್ಯಕ್ಷೆ ಡಾ.ನೀರಜಾ ಬಿರ್ಲಾ, “ಎಂಪವರ್ ಟೆಲಿ-ಮಾನಸ್ ಸೇವೆಗೆ ಬೆಂಬಲಿಸಲು ನಿಮ್ಹಾನ್ಸ್ ಸಹಯೋಗಕ್ಕೆ ಬಹಳ ಹೆಮ್ಮೆ ಪಡುತ್ತದೆ. ನಮ್ಮಂತಹ ಸಾರ್ವಜನಿಕ-ಖಾಸಗಿ ಸಹಭಾಗಿತ್ವಗಳು ಪ್ರಮಾಣೀಕರಣ, ತರಬೇತಿ ಪಡೆದ ಮಾನವ ಸಂಪನ್ಮೂಲ ಮತ್ತು ಸರ್ಕಾರದ ಕಾರ್ಯಕ್ರಮಗಳಿಗೆ ತಾಂತ್ರಿಕ ಬೆಂಬಲ ಪಡೆಯುತ್ತವೆ ಅಲ್ಲದೆ ಸಿಸ್ಟಮ್ಸ್ ಮತ್ತು ಸೇವಾ ಪೂರೈಕೆಗೆ ವೇಗ ಮತ್ತು ಪರಿವರ್ತನೆ ತರಬಲ್ಲವು. ಅಂತಿಮವಾಗಿ ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ಸೇವೆ ಒದಗಿಸಬಲ್ಲವು. ಸರ್ಕಾರದ ಸಕಾಲಿಕ ಮತ್ತು ಅತ್ಯಂತ ಅಗತ್ಯವಾದ ಟೆಲಿ-ಮಾನಸ್ ಕಾರ್ಯಕ್ರಮ ಪ್ರಾರಂಭಿಸಲು ನಾವು ಬಹಳ ಸಂತೋಷ ಹೊಂದಿದ್ದೇವೆ” ಎಂದರು.
ನಿಮ್ಹಾನ್ಸ್ ನ ನಿರ್ದೇಶಕ ಮತ್ತು ಹಿರಿಯ ಪ್ರೊಫೆಸರ್ ಡಾ.ಪ್ರತಿಮಾ ಮೂರ್ತಿ, “ನಾವು ಟೆಲಿಮಾನಸ್ನ ಆನ್-ಗ್ರೌಂಡ್ ಅನುಷ್ಠಾನಕ್ಕೆ ಎಂಪವರ್ ನೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಮುಂದಿನ ಹಂತಕ್ಕೆ ಇಲ್ಲಿ ಒಗ್ಗೂಡಿರುವುದು ಮಹತ್ತರವಾಗಿದೆ. ಮಾನಸಿಕ ಆರೋಗ್ಯವಿಲ್ಲದೆ ಆರೋಗ್ಯವಿಲ್ಲ ಮತ್ತು ಕೋವಿಡ್-೧೯ ಸಾಂಕ್ರಾಮಿಕವು ಎಲ್ಲ ವಯಸ್ಸಿನ ಜನರ ಮಾನಸಿಕ ಸಮಸ್ಯೆಗಳನ್ನು ಅತ್ಯಂತ ತೀವ್ರವಾಗಿ ಹೆಚ್ಚಿಸಿತು. ಈಗ ನಾವು ಟೆಲಿಮಾನಸ್ ಸೇವೆಗಳನ್ನು ದೇಶದ ಮೂಲೆ ಮೂಲೆಗಳಿಗೂ ವಿಸ್ತರಿಸುವುದು ಹೇಗೆಂದು ನೋಡುತ್ತಿದ್ದೇವೆ. ನಮ್ಮ ಗುರಿ ಎಲ್ಲರಿಗೂ ಟೆಲಿಮಾನಸ್ ಸೇವೆಗಳು ದೊರೆಯಬೇಕೆನ್ನುವುದು ನಮ್ಮ ಉದ್ದೇಶ ಹಾಗೂ ಈ ಪ್ರಯಾಣದಲ್ಲಿ ಈ ಕ್ಷೇತ್ರದಲ್ಲಿ ಸದೃಢ ಜ್ಞಾನವಿರುವ ಸಂಸ್ಥೆ ಗಳೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನಿರೀಕ್ಷೆ ಮಾಡುತ್ತಿದ್ದೇವೆ. ಟೆಲಿಮಾನಸ್ನಲ್ಲಿ ನಾವು 20 ಪ್ರಾದೇಶಿಕ ಭಾಷೆಗಳಲ್ಲಿ ಕೌನ್ಸೆಲ್ಲಿಂಗ್ ಸೇವೆಗಳನ್ನು ಒದಗಿಸುತ್ತಿದ್ದೇವೆ. ಟೆಲಿಮಾನಸ್ನಲ್ಲಿ ನಮಗೆ ಚೌಕಟ್ಟಿದೆ ಮತ್ತು ಈ ಕಾರ್ಯಕ್ರಮವನ್ನು ಹಲವು ರಾಜ್ಯಗಳಿಗೆ ಎಂಪವರ್ ವಿಸ್ತರಿಸುವುದನ್ನು ಎದುರು ನೋಡುತ್ತಿದೇವೆ” ಎಂದರು. ಟೆಲಿ-ಮಾನಸ್ ಎರಡು ಹಂತಗಳ ಮಾದರಿ ಅನುಸರಿಸುತ್ತದೆ, ಟೈಯರ್ 1 ರಲ್ಲಿ ರಾಜ್ಯ ಟೆಲಿ-ಮಾನಸ್ ಸೆಲ್ಗಳಿದ್ದು ಅವು ತರಬೇತಿ ಹೊಂದಿದ ಕೌನ್ಸೆಲ್ಲರ್ಗಳು ಮತ್ತು ಮಾನಸಿಕ ಆರೋಗ್ಯದ ತಜ್ಞರನ್ನು ಒಳಗೊಂಡಿರುತ್ತವೆ. ಟೈಯರ್ ೨ರಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ(ಡಿಎಂಎಚ್ಪಿ)/ವೈದ್ಯಕೀಯ ಕಾಲೇಜು ಸಂಪನ್ಮೂಲಗಳು ಭೌತಿಕ ಸಲಹೆ ಮತ್ತು/ಅಥವಾ ಧ್ವನಿ-ದೃಶ್ಯ ಸಲಹೆಗೆ ಇ-ಸಂಜೀವಿನಿ ಒಳಗೊಂಡಿದೆ. ಟೋಲ್-ಫ್ರೀ, 24/7 ಹೆಲ್ಪ್ಲೈನ್ ಸಂಖ್ಯೆ (14416) ದೇಶಾದ್ಯಂತ ರೂಪಿಸಲಾಗಿದ್ದು ಕರೆ ಮಾಡುವವರಿಗೆ ಅವರ ಆದ್ಯತೆ ಭಾಷೆ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅಗತ್ಯ ನೆರವು ಪಡೆಯಬಹುದು. ಈ ಒಡಂಬಡಿಕೆ ಮೂಲಕ ಎಂಪವರ್ ಈ ಕೊಡುಗೆಗಳಿಗೆ ಬೆಂಬಲಿಸುವ ಮೂಲಕ ಭಾರತದಾದ್ಯಂತ ವೃತ್ತಿಪರ ಮಾನಸಿಕ ಆರೋಗ್ಯ ಸೇವೆಗಳನ್ನು ಪಡೆಯಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.