(www.vknews.in) : ಎಚ್.ಐ.ಎಫ್ ಪ್ರಾಜೆಕ್ಟ್ ಆಶಿಯಾನದ ಅಡಿಯಲ್ಲಿ ಬಡವರಿಗೆ, ನಿರ್ಗತಿಕರಿಗೆ ಹೊಸ ಮನೆ ನಿರ್ಮಿಸಿ ಕೊಡುವಂತಹ ಯೋಜನೆಯಡಿಯಲ್ಲಿ 28ನೇ ಮನೆಯನ್ನು ಕಡಬ ತಾಲೂಕಿನ, ಹೊಸಮಜಲು ಮನೆ ನೆಲ್ಯಾಡಿಯೆಂಬಲ್ಲಿ ವಿಧವೆ ಫಲಾನುಭವಿಗೆ ಹಸ್ತಾಂತರಿಸಲಾಯಿತು..
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಹ್ಸಾನ್ ಮಸೀದಿಯ ಖತಿಬರು ಮೌಲಾನ ತಯ್ಯಬ್ ರವರು ದೇವಬಯ ಮತ್ತು ಪ್ರಾಮಾಣಿಕ ನಿಸ್ವಾರ್ಥ ಸೇವೆಯಿಂದ ಮಾತ್ರ ಸಂಘಟನೆಗೆ 28 ಮನೆಗಳನ್ನು ಮಾಡಲು ಸಾಧ್ಯವಾಯಿತು ಎಂದು ನುಡಿದರು.
ಮತ್ತೋರ್ವ ಮುಖ್ಯ ಅತಿಥಿ ಬದ್ರಿಯ ಜುಮಾ ಮಸೀದಿಯ ಮಾಜಿ ಅಧ್ಯಕ್ಷ M.B ನಝೀರ್ ಮಠ ಮಾತನಾಡಿ ಎಚ್.ಐ.ಎಫ್ ಇಂಡಿಯಾದ ಸಮಾಜಮುಖಿ ಕಾರ್ಯಗಳಾದ ಸೂರಿಲ್ಲದವರಿಗೆ ಮನೆಯನ್ನು ನಿರ್ಮಿಸಿ ಕೊಡುವ ಯೋಜನೆ, ವೈದ್ಯಕೀಯ ನೆರವು, ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಮಸೀದಿಗಳ ನಿರ್ಮಾಣ ಇವೆಲ್ಲವೂ ಪ್ರತಿ ಮೊಹಲ್ಲಗಳಲ್ಲಿ, ಮಸೀದಿಗಳಲ್ಲಿರುವ ಸಂಘಟನೆ ಮಾಡಬೇಕಾದಂತಹ ಮಾದರಿ ಕಾರ್ಯವಾಗಿದೆ ಎಂದು ನುಡಿದರು.
ಎಚ್.ಐ.ಎಫ್ ಕಾರ್ಯ ನಿಜಕ್ಕೂ ಶ್ಲಾಘನೀಯ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು. ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.ಅತಿಥಿಗಳು ಕೈ ಕೀಲಿ ಮತ್ತು ಒಂದು ತಿಂಗಳ ರೇಷನ್ ಫಲಾನುಭವಿಗೆ ನೀಡದರು.
ಎಚ್.ಐ.ಎಫ್ ಇಂಡಿಯಾ ಕಾರ್ಯದರ್ಶಿ ಆದಿಲ್ ಪರ್ವೇಜ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. 29 ಮತ್ತು 30ನೇ ಮನೆಯ ಕಾಮಗಾರಿ ಪ್ರಗತಿಯಲ್ಲಿದೆ ಅತಿ ಶೀಘ್ರದಲ್ಲಿ ಫಲಾನುಭವಿಗೆ ಮನೆಯನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು. ಶಕೀಫ್ ಆದಿಲ್ ಪರ್ವೇಜ್ ಕಿರಾತ್ ಪಟಿಸಿದರು. ಎಚ್.ಐ.ಎಫ್ ಪ್ರಾಜೆಕ್ಟ್ ಆಶಿಯಾನದ ಸಂಚಾಲಕ ಔಸಾಫ್ ಹುಸೈನ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.