ಹೊಸದಿಲ್ಲಿ (ವಿಶ್ವ ಕನ್ನಡಿಗ ನ್ಯೂಸ್) : ರಸ್ತೆ ಕುಸಿತದಿಂದ ಹೊಂಡವೊಂದಕ್ಕೆ ಪಕ್ಕದಲ್ಲಿ ನಿಲ್ಲಿಸಿದ್ದ ಎರಡು ಮೋಟಾರ್ ಬೈಕ್ಗಳು ಮತ್ತು ನಾಯಿ ಬಿದ್ದ ಘಟನೆ ನವದೆಹಲಿಯಲ್ಲಿ ನಡೆದಿದೆ. ನವದೆಹಲಿಯ ಆರ್ ಕೆ ಪುರಂನಲ್ಲಿ ಕಿರಿದಾದ ರಸ್ತೆಯಲ್ಲಿ ಕುಸಿತ ಸಂಭವಿಸಿದೆ. ಶನಿವಾರ ಮಧ್ಯಾಹ್ನ 12.24ರ ಸುಮಾರಿಗೆ ಈ ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಟ್ವಿಟರ್ನಲ್ಲಿ ಅಪಘಾತದ ದೃಶ್ಯಗಳನ್ನು ಹಂಚಿಕೊಂಡಿದೆ. ರಸ್ತೆಯಲ್ಲಿ ಎರಡು ಬೈಕ್ಗಳು ನಿಂತಿದ್ದು, ನಾಯಿ ಮಲಗಿರುವುದು ದೃಶ್ಯಾವಳಿಗಳಲ್ಲಿ ಕಂಡು ಬರುತ್ತಿದೆ. ಏಕಾಏಕಿ ರಸ್ತೆ ಕುಸಿದು ದ್ವಿಚಕ್ರ ವಾಹನಗಳು ಮತ್ತು ನಾಯಿಗಳು ಗುಂಡಿಗೆ ಬೀಳುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಹಲವರು ರಸ್ತೆ ಗುಂಡಿಗಳ ಬಗ್ಗೆ ಟೀಕೆಗೆ ಮುಂದಾದರು.
https://twitter.com/ANI/status/1629380237279776768
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.