ಜೆದ್ದಾ(www.vknews.in): ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿಗಳಾಗಿರುವ ಗಂಜಿಮಠ ಮೊಹಲ್ಲಾದ ಸಮಾನ ಮನಸ್ಕ ಯುವಕರು ಸೇರಿ ರಚಿಸಿದ ಒಂದು ಅನಿವಾಸಿ ಸಂಘಟನೆಯಾಗಿದೆ ಗಂಜಿಮಠ ನಾನ್ ರೆಸಿಡೆಂಟ್ ಎಮಿಗ್ರೆಂಟ್ ಅಸೋಸಿಯೇಶನ್ ಅಥವಾ GNREA ಕಳೆದ ಒಂದು ದಶಕಗಳಿಂದ ಕಾರ್ಯಚರಸುತ್ತಿರುವ ಈ ಸಂಘಟನೆಯ ಸದಸ್ಯರು ಸೌದಿ ಅರೇಬಿಯಾ, ಯುಎಇ, ಬಹ್ರೈನ್, ಕತಾರ್ ಹಾಗೂ ಮಸ್ಕತ್ ಗಳಲ್ಲಿ ಉದ್ಯೋಗಿಗಳಾಗಿದ್ದು, ತಮ್ಮ ಗಂಜಿಮಠ ಹಾಗೂ ಸುತ್ತಮುತ್ತಲಿನ ಮೊಹಲ್ಲಾಗಳಲ್ಲಿರುವ ಹತ್ತು ಹಲವು ಸಾಮಾಜಿಕ ಹಾಗೂ ದಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿರುತ್ತದೆ. ಗಂಜಿಮಠ ಮೊಹಲ್ಲಾದ ಬಡ ಹಾಗೂ ನಿರ್ಗತಿಕರ ಪಾಲಿಗೆ ಆಶಾಕಿರಣವಾಗಿರುವ ಈ ಸಂಘಟನೆಯ ಸದಸ್ಯರು ತಮ್ಮ ಮೊಹಲ್ಲಾದ ಏಳಿಗೆಗಾಗಿ ಆಹೋರಾತ್ರಿ ಶ್ರಮಿಸುತ್ತಿದ್ದು, ಇದರ ಪ್ರಯುಕ್ತವಾಗಿ 9 10ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ಹಗಲು ರಾತ್ರಿ ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸುತ್ತಿದೆ. ಜೆದ್ದಾದ ಟಾರ್ಗೆಟ್ ಗಾಯ್ಸ್ ಪೆವಿಲಿಯನ್ ನಲ್ಲಿ ನಡೆಯುತ್ತಿರುವ ಈ 5 ಓವರ್ ಗಳ ಲೀಗ್ ಹಂತದ ’GNREA TROPHY SEASON-2’ ಕ್ರಿಕೆಟ್ ಪಂದ್ಯಾಟದಲ್ಲಿ ತಾವೆಲ್ಲರೂ ಭಾಗವಹಿಸಿ ಸಹಕರಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
– ಅದ್ಯಕ್ಷರು ಹಾಗೂ ಸರ್ವ ಸದಸ್ಯರು ಗಂಜಿಮಠ ನಾನ್ ರೆಸಿಡೆಂಟ್ ಎಮಿಗ್ರೆಂಟ್ ಅಸೋಸಿಯೇಶನ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.