ಲಖನೌ (ವಿಶ್ವ ಕನ್ನಡಿಗ ನ್ಯೂಸ್) : ಗಂಡನ ಮನೆಯ ಅಂತರ ತುಂಬಾ ದೂರವಾಗಿದೆ ಎಂದು ಮನಗಂಡ ವಧು ಮದುವೆಯನ್ನು ತೊರೆದು ಸ್ವಂತ ಮನೆಗೆ ತೆರಳಿದ್ದಾಳೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಸ್ಥಳ ಉತ್ತರ ಪ್ರದೇಶದ ಪ್ರಯಾಗ್ರಾಜ್ ಎಂದು ಯುವಕ ವಧುವಿನ ಮನೆಯವರಿಗೆ ತಿಳಿಸಿದ್ದಾನೆ. ಆದರೆ ಮದುವೆಯ ನಂತರ ಗಂಡನ ಮನೆಗೆ ಹೋಗುವಾಗ, ವಧುವಿಗೆ ಯುವಕನ ಮನೆ ರಾಜಸ್ಥಾನ, ಪ್ರಯಾಗ್ರಾಜ್ ಅಲ್ಲ ಎಂದು ತಿಳಿಯುತ್ತದೆ. ನಂತರ ನಾಟಕೀಯ ಘಟನೆಗಳು ತೆರೆದುಕೊಂಡವು.
ಯುವತಿ ರಾಜಸ್ಥಾನದ ಬಿಕಾನೇರ್ ಮೂಲದ ರವಿ ಎಂಬಾತನನ್ನು ಮದುವೆಯಾಗಿದ್ದಳು. ವಾರಣಾಸಿಯಲ್ಲಿ ವಿವಾಹ ಸಮಾರಂಭಗಳು ನಡೆದವು. ಮದುವೆ ಮುಗಿಸಿ ನವದಂಪತಿಗಳು ಹಾಗೂ ಅವರ ಸಂಬಂಧಿಕರು ಗಂಡನ ಮನೆಗೆ ಮರಳುತ್ತಿದ್ದರು. ಇದೇ ವೇಳೆ ಕಾನ್ಪುರದ ಪೆಟ್ರೋಲ್ ಪಂಪ್ನಲ್ಲಿ ಬಸ್ ನಿಂತಾಗ ಆ ಪ್ರದೇಶದಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳ ಬಳಿ ತೆರಳಿದ ಮಹಿಳೆ ಇಷ್ಟು ದೂರ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡರು. ಚಕೇರಿ ಎಸಿಪಿ ಅಮರನಾಥ್ ಘಟನೆಯನ್ನು ಬಹಿರಂಗಪಡಿಸಿದ್ದಾರೆ.
ನಾನು ಕಳೆದ ಏಳು ಗಂಟೆಗಳಿಂದ ವಾರಣಾದಿಂದ ಪ್ರಯಾಣಿಸುತ್ತಿದ್ದೇನೆ. ಇನ್ನೂ ಗಂಡನ ಮನೆಗೆ ತಲುಪಿಲ್ಲ. ನಾನು ಸಂಪೂರ್ಣವಾಗಿ ದಣಿದಿದ್ದೆನೆ. ನನಗೆ ಈಗ ರಾಜಸ್ಥಾನಕ್ಕೆ ಹೋಗಲು ಇಷ್ಟವಿಲ್ಲ. ಅಷ್ಟು ದೂರ ಹೋಗಲಾರೆ’ ಎಂದು ಎಸಿಪಿ ಬಳಿ ಯುವತಿ ಅಳಲು ತೋಡಿಕೊಂಡರು. ನಂತರ ಎಸಿಪಿ ಘಟನೆಯ ತನಿಖೆ ನಡೆಸುವಂತೆ ಕರ್ತವ್ಯದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಗೆ ಸೂಚಿಸಿದರು.
ಆದರೆ ಮಹಿಳೆಯ ಮನೆಯವರಿಗೆ ತನ್ನ ಹುಟ್ಟೂರು ರಾಜಸ್ಥಾನ ಎಂದು ತಿಳಿದಿತ್ತು ಎಂದು ವರನು ಪೊಲೀಸರಿಗೆ ತಿಳಿಸಿದ್ದಾನೆ. ಬಳಿಕ ಯುವತಿಯ ತಾಯಿಯನ್ನು ಸಂಪರ್ಕಿಸಿದಾಗ ಈ ಬಗ್ಗೆ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ತಾಯಿ ಕೂಡ ತನ್ನ ಮಗಳನ್ನು ವಾರಣಾಸಿಗೆ ವಾಪಸ್ ಕಳುಹಿಸುವಂತೆ ಕೇಳಿಕೊಂಡಿದ್ದಾರೆ. ನಂತರ ಪೊಲೀಸರು ವಧುವನ್ನು ವಾಪಸ್ ತವರು ಮನೆಗೆ ಕಳುಹಿಸಿದ್ದು, ವರ ಬರಿಗೈಯಲ್ಲಿ ಮನೆಗೆ ಮರಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.