ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ಬೆಂದೂರ್ವೆಲ್ನಲ್ಲಿ ಸ್ಕೂಟಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಬಾಲಕ ಬಸ್ ನಡಿಗೆ ಬಿದ್ದು ಸಾವನಪ್ಪಿರುವ ಘಟನೆ ನಡೆಡಿದ್ದು, ಘಟನೆಯಲ್ಲಿ ಬಾಲಕನ ತಾಯಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾರ್ದಿಕ್(7) ಮೃತಪಟ್ಟ ಬಾಲಕ.
ಸ್ವಾತಿ ಎನ್ನುವವರು ತನ್ನ ಮಗುವಿನೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಸ್ ಚಾಲಕನ ನಿರ್ಲಕ್ಷ್ಯದಿಂದ ಸ್ಕೂಟಿಯ ಹ್ಯಾಂಡಲ್ ಬಸ್ಗೆ ತಾಗಿ ಮಗುವಿನ ಸಮೇತ ತಾಯಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ನ ಚಕ್ರದಡಿಗೆ ಮಗು ಸಿಲುಕಿ ಮೃತಪಟ್ಟಿದೆ. ಘಟನೆಯಲ್ಲಿ ತಾಯಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಮಂಗಳೂರು ನಗರ ಪೂರ್ವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಕೋಚಿಂಗ್ ಸೆಂಟರಿನಲ್ಲಿ ಉಪನ್ಯಾಸಕಿಯಾಗಿರುವ ಸ್ವಾತಿ, ನಂತೂರಿನಲ್ಲಿ ಮನೆ ಹೊಂದಿದ್ದಾರೆ. ಹುಡುಗನ ತಂದೆ ಪ್ರಮೋದ್, ಬಂಟ್ಸ್ ಹಾಸ್ಟೆಲ್ ನಲ್ಲಿ ಆಟೊಮೊಬೈಲ್ ಸಂಸ್ಥೆಯನ್ನು ಹೊಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.