ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕಸ್ಟಮ್ಸ್ ತಪಾಸಣೆ ಮುಗಿಸಿ ಕಣ್ಣೂರು ವಿಮಾನ ನಿಲ್ದಾಣದಿಂದ ಹೊರ ಬಂದ ಪ್ರಯಾಣಿಕರೊಬ್ಬರಿಂದ ಒಂದೂವರೆ ಕೆಜಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಬುಧಾಬಿಯಿಂದ ಬಂದಿದ್ದ ಕಾಸರಗೋಡು ಮೂಲದ ಶೆರಾಫತ್ ಮುಹಮ್ಮದ್ ಎಂಬಾತನಿಂದ ಮಟ್ಟನ್ನೂರು ವಿಮಾನ ನಿಲ್ದಾಣ ಪೊಲೀಸರು ಮತ್ತು ಪೊಲೀಸ್ ವಿಶೇಷ ದಳ ಚಿನ್ನವನ್ನು ವಶಪಡಿಸಿಕೊಂಡಿದೆ.
ಅನುಮಾನದ ಮೇಲೆ ಸಿಎಫ್ಎಲ್ ಬಲ್ಬ್ನಲ್ಲಿ ಮುದ್ದೆಯಾಗಿ ಬಚ್ಚಿಟ್ಟಿದ್ದ ಒಂದೂವರೆ ಕಿಲೋ ಚಿನ್ನ ಹಾಗೂ ಬ್ಯಾಗ್ನಲ್ಲಿದ್ದ ಗೃಹೋಪಯೋಗಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 86 ಲಕ್ಷ ಮೌಲ್ಯದ ಚಿನ್ನ ಪತ್ತೆಯಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.