ಜೆದ್ದಾ(www.vknews.in): ರಂಝಾನ್ ಪ್ರಾರಂಭವಾದ ದಿನದಿಂದ ಮಕ್ಕಾ ಹಾಗೂ ಮದೀನಾ ನಗರಗಳು ವಿಶ್ವಾಸಿಗಳಿಂದ ತುಂಬಿ ತುಳುಕುತ್ತಿದೆ. ಎರಡೂ ಹರಂಗಳಲ್ಲಿ ಜನ ಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸ್ವಯಂ ಸೇವಕರು ಹರಸಹಾಸ ಪಡುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಸೌದಿ ಅರೇಬಿಯಾದ ನಾಗರೀಕರು ಹಾಗೂ ಪ್ರವಾಸಿಗಳಿಗೆ ರಂಝಾನ್ ತಿಂಗಳು ಒಂದೇ ಬಾರಿ ಮಾತ್ರ ಉಮ್ರಾ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಅದಾಗ್ಯೂ ಉಮ್ರಾ ನಿರ್ವಹಿಸಲು ಮಕ್ಕಾಗ್ ಬರುವ ಯಾತ್ರಾರ್ಥಿಗಳು ಕಅಬಾಲಯದ ಮುಂದೆ ಹಾಗೂ ಮಸ್ಜಿದುಲ್ ಹರಂನಲ್ಲಿ ಸೆಲ್ಫಿ ಹಾಗೂ ಫೋಟೋ ಕ್ಲಿಕ್ಕಿಸವುದು ಪೊಲೀಸರನ್ನು ಮತ್ತಷ್ಟು ಪೇಚಿಗೆ ಸಿಲುಕಿಸುತ್ತಿದೆ. ಹರಂ ಪರಿಸರದಲ್ಲಿ ಅನುಮತಿಯಿಲ್ಲದೆ ಫೋಟೋ ಕ್ಲಿಕ್ಕಿಸುವುದು ನಿಷೇಧವಾಗಿದ್ದರೂ ಹೊರಗಿನಿಂದ ಬರುವ ಯಾತ್ರಾರ್ಥಿಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ಹಜ್ ಮಂತ್ರಾಲಯದ ಪ್ರಕಾರ ಈ ನಿಯಮೋಲ್ಲಂಘನೆಯು ದಂಡಾರ್ಹ ಅಪರಾಧವಾಗಿದೆ. ಇದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಅಜ್ಞಾಪಿಸಲಾಗಿದೆ. ಮಕ್ಕಾದ ಕಅಬಾಲಯಕ್ಕೆ ಬರುವ ಯಾತ್ರಾರ್ಥಿಗಳು ತಾವು ಅಲ್ಲಾಹನ ಸಾನಿಧ್ಯಕ್ಕೆ ಬಂದಿರುವುದೆಂದೂ, ಈ ಪವಿತ್ರ ಸ್ಥಳಕ್ಕೆ ಬಂದಿರುವುದು ಫೋಟೋ ಕ್ಲಿಕ್ಕಿಸಲು ಅಲ್ಲವೆಂಬ ವಿಚಾರವನ್ನು ತಿಳಿದಿರಬೇಕೆಂದು ಹಜ್ ಮಂತ್ರಾಲಯವು ಎಲ್ಲಾ ವಿಶ್ವಾಸಿಗಳಿಗೂ ಕಿವಿಮಾತು ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.