ಕೊಚ್ಚಿ (ವಿಶ್ವ ಕನ್ನಡಿಗ ನ್ಯೂಸ್) | ಬಾಲಕರ ಮುಂಜಿ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ಧಾರ್ಮಿಕೇತರ ನಾಗರಿಕರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಟಿ.ಎಂ. ಆರಿಫ್ ಹುಸೇನ್ ಸೇರಿದಂತೆ ಐವರು ಈ ಅರ್ಜಿಯ ಭಾಗವಾಗಿದ್ದರು. ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿದ ಅರ್ಜಿಯು ಕಾನೂನುಬದ್ಧವಾಗಿ ಸುಸ್ಥಿರವಾಗುವುದಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಮುರಳಿ ಪುರುಷೋತ್ತಮ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
18 ವರ್ಷಕ್ಕಿಂತ ಮುಂಚಿತವಾಗಿ ಮುಂಜಿ ಕರ್ಮವನ್ನು ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಅರ್ಜಿದಾರರ ಪರವಾಗಿ ನ್ಯಾಯವಾದಿ ಡಾ.ಹರೀಶ್, ವಿರೋಧ ಪಕ್ಷದ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕ ಅಡ್.ಜೀವೇಶ್ ವಾದಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.