ಹೈದರಾಬಾದ್ (ವಿಶ್ವ ಕನ್ನಡಿಗ ನ್ಯೂಸ್) : ನಾಳೆ ರಾಮನವಮಿ ಮೆರವಣಿಗೆ ನಡೆಯಲಿರವುದರಿಂದ ಹೈದರಾಬಾದ್ನ ಮಸೀದಿಗಳು ಮತ್ತು ದರ್ಗಾಗಳಿಗೆ ಬಟ್ಟೆಯಿಂದ ಮುಚ್ಚಲಾಗಿದೆ. ಹಿಂದುತ್ವದ ಉಗ್ರರ ದಾಳಿಗೆ ಹೆದರಿ ಈ ಕ್ರಮ ಕೈಗೊಳ್ಳಲಾಗಿದೆ. ಸಿದ್ಧಿಯಾಂಬರ್ ಬಜಾರ್ ಮಸೀದಿ ಮತ್ತು ದರ್ಗಾವನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಸಿದ್ಧಿಯಾಂಬರ್ ಮಸೀದಿ ಬಟ್ಟೆಯಿಂದ ಮುಚ್ಚಲ್ಪಟ್ಟಿದೆ.
ಮಾರ್ಚ್ 30 ರಂದು ಬೆಳಗ್ಗೆ 9 ಗಂಟೆಗೆ ಸೀತಾರಾಂಬಾಗ್ ದೇವಸ್ಥಾನದಿಂದ ಮೆರವಣಿಗೆ ಹೊರಟು ಸಂಜೆ 7 ಗಂಟೆಗೆ ಕೋಟಿ ಹನುಮಾನ್ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ. ಮೆರವಣಿಗೆಯು ಭೋಯಿಗುಡ ಕಮಾನ್, ಮಂಗಲ್ಹಾಟ್ ಪೊಲೀಸ್ ಠಾಣೆ ರಸ್ತೆ, ಜಾಲಿ ಹನುಮಾನ್, ಧುಲ್ಪೇಟ್ ಪುರಾಣಪುಲ್ ರಸ್ತೆ, ಗಾಂಧಿ ಪ್ರತಿಮೆ, ಜುಮೆರಾತ್ ಬಜಾರ್, ಬೇಗಂ ಬಜಾರ್ ಛತ್ರಿ, ಸಿದ್ಧಿಯಂಬರ್ ಬಜಾರ್, ಶಂಕರ್ ಶೇರ್ ಹೋಟೆಲ್, ಗೌಳಿಗುಡ ಚಮನ್, ಪುತ್ಲಿಬೌಲಿ ಕ್ರಾಸ್ರೋಡ್ಸ್, ಕೋಟಿ ಮತ್ತು ಸುಲ್ತಾನ್ ಬಝಾರ್ ಮೂಲಕ ಸಾಗಲಿದೆ.
ಬಿಜೆಪಿಯಿಂದ ಅಮಾನತುಗೊಂಡಿರುವ ವಿವಾದಿತ ಶಾಸಕ ರಾಜಾ ಸಿಂಗ್ ರಾಮನವಮಿ ಮೆರವಣಿಗೆಯನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷದ ಮೆರವಣಿಗೆಯಲ್ಲಿ ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಶಾಹಿನಾಯತ್ಗುಂಜ್ ಪೊಲೀಸರು ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ರಂಜಾನ್ ಸಂದರ್ಭದಲ್ಲಿ ಹೈದರಾಬಾದ್ನಲ್ಲಿ ಮುಸ್ಲಿಮರು ಹಿಂದೂ ವ್ಯಾಪಾರಿಗಳನ್ನು ಬಹಿಷ್ಕರಿಸಿದ್ದಾರೆ ಎಂದು ರಾಜಾ ಸಿಂಗ್ ಆರೋಪಿಸಿದ್ದರು. ಪ್ರತಿಯಾಗಿ ಹಿಂದೂಗಳು ಬಹಿಷ್ಕಾರ ಘೋಷಿಸಿದರೆ ಮುಸ್ಲಿಮರಿಗೆ ಭಿಕ್ಷೆಯೂ ಸಿಗುವುದಿಲ್ಲ. ಹಿಂದೂಗಳು ಎಚ್ಚೆತ್ತುಕೊಂಡರೆ ಮುಸ್ಲಿಮರು ನಿರ್ನಾಮವಾಗುತ್ತಾರೆ ಎಂದು ರಾಜಾ ಸಿಂಗ್ ಘೋಷಿಸಿದ್ದರು.
श्री राम नवमी शोभा यात्रा में आप सभी का स्वागत है। 🗓 30 मार्च 2023⌚ सुबह 10 बजे।📍 धूलपेट स्तिथ आकाशपुरी हनुमान मंदिर से प्रारंभ होगी। जय श्री राम 🚩 #SriRamNavami pic.twitter.com/ACr2qOs9qu — Raja Singh (Modi Ka Parivar) (@TigerRajaSingh) March 28, 2023
श्री राम नवमी शोभा यात्रा में आप सभी का स्वागत है।
🗓 30 मार्च 2023⌚ सुबह 10 बजे।📍 धूलपेट स्तिथ आकाशपुरी हनुमान मंदिर से प्रारंभ होगी।
जय श्री राम 🚩 #SriRamNavami pic.twitter.com/ACr2qOs9qu
— Raja Singh (Modi Ka Parivar) (@TigerRajaSingh) March 28, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.