(www.vknews.in) : ಬೋಳು ತಲೆಯಲ್ಲಿ ಕೂದಲು ಬೆಳೆಯಲು, ಕೂದಲಿನ ಬಣ್ಣ ಕಪ್ಪಾಗಿಸಲು ಹಾಗೂ ದೇಹದ ಬೊಜ್ದು ಕರಗಿಸಲು ಔಷಧಿ ನೀಡುವ ಸೋಗಿನಲ್ಲಿ ಅಮಾಯಕರನ್ನು ಗುರಿಯಾಗಿಸಿ ಹಣ ಸುಲಿಗೆ ಮಾಡುವ ಬೃಹತ್ ಜಾಲವೊಂದು ರಿಯಾದ್ ನ ಬತ್ತಾ ಹಾಗೂ ಜೆದ್ದಾದ ಬಲದ್ ನಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ರಿಯಾದ್ ನ ಬತ್ತಾದಲ್ಲಿ ವಂಚಕ ಗ್ಯಾಂಗ್ ಗಳು ವ್ಯಾಪಕವಾಗಿ ಹರಡುತ್ತಿವೆ. ಈಗಾಗಲೇ ಅನೇಕ ಜನರು ವಿವಿಧ ರೀತಿಯ ವಂಚನೆ ಗ್ಯಾಂಗ್ ಗಳ ಬಲೆಗೆ ಬಿದ್ದಿದ್ದಾರೆ. ಅನೇಕ ಜನರು ಹಣವನ್ನು ಕಳೆದುಕೊಂಡಿದ್ದಾರೆ. ವಂಚನೆಗೊಳಗಾಗವರಲ್ಲಿ ಅನೇಕ ಅನಿವಾಸಿ ಕನ್ನಡಿಗರೂ ಒಳಗೊಂಡಿದ್ದಾರೆ.
ಇನ್ನು ಜೆದ್ದಾದ ಬಲದ್ ನಲ್ಲಿ ಬೋಳುತಲೆಯ ವ್ಯಕ್ತಿಗಳು, ಬೊಜ್ಜು ದೇಹವನ್ನು ಹೊಂದಿರುವ ಜನರೊಂದಿಗೆ ಸ್ನೇಹ ಬೆಳೆಸುವಂತೆ ನಟಿಸುವ ಮೂಲಕ ಹಣವನ್ನು ಸುಲಿಗೆ ಮಾಡುವ ವಂಚಕರ ದೊಡ್ಡ ಗ್ಯಾಂಗ್ ತಿರುಗಾಡುತ್ತಿರುತ್ತದೆ.
ಅವರು ಸ್ನೇಹಿತರಂತೆ ನಟಿಸಿ ಜನರ ಮೆಚ್ಚುಗೆಯನ್ನು ಗಳಿಸುವುದ ಮೂಲಕ ತಲೆಗೂದಲು ಬೆಳೆಯಲು ಹಾಗೂ ದೇಹದ ಬೊಜ್ಜು ಕರಗಿಸಲು ಮಾಡಬೇಕಾದ ಆಯುರ್ವೇದ ಉತ್ಪನ್ನಗಳ ಕುರಿತು ವಿವರಿಸಿ ಪಕ್ಕದಲ್ಲಿರುವ ಅಂಗಡಿಗೆ ಹೋಗಿ ಆಯುರ್ವೇದಿಕ್ ಉತ್ಪನ್ನಗಳನ್ನು ಖರೀದಿ ಮಾಡಿಸುವುದರ ಮೂಲಕ ಹಣ ಸುಲಿಗೆ ಮಾಡುತ್ತಾರೆ. ಈ ಅಂಗಡಿಯ ವ್ಯಕ್ತಿ ಕೂಡ ವಂಚಕರ ಗ್ಯಾಂಗ್ ಗೆ ಸೇರಿದವರಾಗಿರುತ್ತಾರೆ. ಈ ಹಿಂದೆ ಎಲ್ಲಿಯೂ ಕೇಳಿರದ ಆಯುರ್ವೇದ ಉತ್ಪನ್ನವನ್ನು ಅವರ ಅಂಗಡಿಯಲ್ಲಿ ಮಾತ್ರ ಕಾಣಬಹುದಾಗಿದೆ. ಬತ್ತಾ ಹಾಗೂ ಬಲದ್ ಗಳಲ್ಲಿ ಅಂತಹ ಅಂಗಡಿಗಳನ್ನು ಪಾಕಿಸ್ತಾನಿಗಳು ಮತ್ತು ಉತ್ತರ ಭಾರತೀಯರು ಅನೇಕ ಸ್ಥಳಗಳಲ್ಲಿ ತೆರೆದಿದ್ದಾರೆ. ಐನೂರರಿಂದ ಏಳು ನೂರು ರಿಯಾಲ್ ಗಳಿಗೆ ಲಭ್ಯವಾಗುವ ಈ ಔಷಧಿ ಖರೀದಿ ಮಾಡಿಸುವ ಮೂಲಕ ಅಮಾಯಕರನ್ನು ತಮ್ಮ ಬಲೆಗೆ ಬೀಳಿಸುತ್ತಾರೆ. ವಂಚಕರಲ್ಲಿ ಹೆಚ್ಚಿನವರು ಉತ್ತರ ಭಾರತೀಯರು ಅಥವಾ ಪಾಕಿಸ್ತಾನಿಗಳು ಮತ್ತು ಅವರಲ್ಲಿ ಕೆಲವರು ಅವರೊಂದಿಗೆ ಕುಟುಂಬವನ್ನು ಹೊಂದಿದ್ದಾರೆ.
ಆದಾಗ್ಯೂ, ವಂಚನೆಗಳು ಇನ್ನೂ ವ್ಯಾಪಕವಾಗಿವೆ ಎಂಬುದು ವಾಸ್ತವ. ಬತ್ತಾ ಹಾಗೂ ಬಲದ್ ನಲ್ಲಿರುವ ಈ ಮೋಸದ ಗ್ಯಾಂಗ್ ಗಳ ಬಲೆಗೆ ಬೀಳದಂತೆ ಅನಿವಾಸಿ ಭಾರತೀಯರು ಜಾಗರೂಕರಾಗಿರುವಂತೆ ವಿಕೆ ನ್ಯೂಸ್ ಪರವಾಗಿ ವಿನಂತಿಸಿಕೊಳ್ಳುತ್ತಿದೆ.
ವಿಶೇಷ ವರದಿ: ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.