ಮಸ್ಕತ್(www.vknews.in): ಒಮಾನ್ನ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಸುವೈಖ್, ಖಬುರಾ, ಖುರಿಯಾತ್, ಅಮೀರತ್, ಸುಹಾರ್, ಅವಬಿ, ರುಸ್ತಾಕ್, ಸಮೇಲ್, ಜಲನ್ ಬಾನಿ ಬೂ ಅಲಿ ಮತ್ತು ಇಸ್ಕಿ ಮುಂತಾದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿಯವರೆಗೂ ಮುಂದುವರೆಯಿತು. ನಿರಂತರ ಗಾಳಿ ಮಳೆಯ ನಂತರ, ಪ್ರವಾಹಕ್ಕೆ ಸೃಷ್ಟಿಯಾಯಿತು. ವಿವಿಧೆಡೆ ಕಣಿವೆಗಳಿಗೆ ಬಿದ್ದು ವಾಹನಗಳು ಕೊಚ್ಚಿ ಹೋಗಿವೆ. ಆಲಿಕಲ್ಲು ಕೂಡ ಬಿದ್ದಿರುವ ಕುರಿತು ವರದಿಯಾಗಿದೆ.
ಮಸ್ಕತ್ ಗವರ್ನರೇಟ್ ನಲ್ಲಿ ಬಂಡೆಯೊಂದು ರಸ್ತೆಗೆ ಬಿದ್ದು ವಾಹನಗಳಿಗೆ ಹಾನಿಯಾಗಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಅಮೀರತ್-ಖುರಿಯಾತ್ ರಸ್ತೆಯಲ್ಲಿ ಬಂಡೆ ಬಿದ್ದು ಈ ಅವಘಡ ಸಂಭವಿಸಿದೆ. ಯಾರಿಗೂ ಗಾಯಗಳಾಗಿಲ್ಲ ಎಂದು ನಾಗರಿಕ ರಕ್ಷಣಾ ಮತ್ತು ಆಂಬ್ಯುಲೆನ್ಸ್ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.